Friday, June 5, 2026
Homeಕರಾವಳಿಉಡುಪಿಉಡುಪಿ: ವಿವಾಹಕ್ಕೆ ಆಗಮಿಸಿದ್ದ ಮಹಿಳೆ ಬಸ್ ಡಿಕ್ಕಿಯಾಗಿ ಸಾವು

ಉಡುಪಿ: ವಿವಾಹಕ್ಕೆ ಆಗಮಿಸಿದ್ದ ಮಹಿಳೆ ಬಸ್ ಡಿಕ್ಕಿಯಾಗಿ ಸಾವು

- Advertisement -
- Advertisement -

ಉಡುಪಿ: ವಿವಾಹಕ್ಕೆ ಆಗಮಿಸಿದ್ದ ಮಹಿಳೆ ರಸ್ತೆ ದಾಟುವ ವೇಳೆ ಬಸ್‌ ಢಿಕ್ಕಿಯಾಗಿ ಮೃತಪಟ್ಟ ಘಟನೆ ಉಡುಪಿಯ ಅಂಬಾಗಿಲಿನಲ್ಲಿರುವ ಅಮೃತ್‌ಗಾರ್ಡನ್‌ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಹೆಬ್ರಿ ನಿವಾಸಿ ವಸಂತಿ ಶೆಟ್ಟಿ (65) ಮೃತ ದುರ್ದೈವಿ. ಅಮೃತ್‌ಗಾರ್ಡನ್‌ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ವಸಂತಿ ಅವರು ರಾ.ಹೆ.ದಾಟುತ್ತಿದ್ದಾಗ ರಸ್ತೆಯ ಮಧ್ಯದಲ್ಲಿರುವ ಡಿವೈಡರ್‌ ಬಳಿಗೆ ತಲುಪುವಷ್ಟರಲ್ಲಿ ಕುಂದಾಪುರ ಕಡೆಯಿಂದ ಉಡುಪಿಗೆ ವೇಗವಾಗಿ ಬರುತ್ತಿದ್ದ ಬಸ್‌ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ವಸಂತಿ ಅವರ ತಲೆ,ಕೈ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು,ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರು ಅಷ್ಟರಲ್ಲಿ ಮೃತಪಟ್ಟಿದ್ದಾರೆ.

ಈ ಕುರಿತು ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

- Advertisement -

Latest News

error: Content is protected !!