Thursday, June 4, 2026
Homeಕರಾವಳಿಬೆಳ್ತಂಗಡಿ : ಕೊಕ್ಕಡ ಮಹಿಳೆ ಅನುಮಾಸ್ಪದ ಸಾವು ಪ್ರಕರಣಕ್ಕೆ ಟಿಸ್ಟ್: ಗಂಡನಿಂದಲೇ ಪತ್ನಿಯ ಕೊಲೆ: ಜೈಲು...

ಬೆಳ್ತಂಗಡಿ : ಕೊಕ್ಕಡ ಮಹಿಳೆ ಅನುಮಾಸ್ಪದ ಸಾವು ಪ್ರಕರಣಕ್ಕೆ ಟಿಸ್ಟ್: ಗಂಡನಿಂದಲೇ ಪತ್ನಿಯ ಕೊಲೆ: ಜೈಲು ಪಾಲಾದ ಪತಿರಾಯ

- Advertisement -
- Advertisement -

ಬೆಳ್ತಂಗಡಿ; ಕೊಕ್ಕಡದಲ್ಲಿ ಮಹಿಳೆಯ ಅನುಮಾಸ್ಪದ ಸಾವು ಪ್ರಕರಣಕ್ಕೆ ಟಿಸ್ಟ್  ಸಿಕ್ಕಿದೆ. ಗಂಡನಿಂದಲೇ ಪತ್ನಿಯ ಕೊಲೆಯಾಗಿರೋದು ಬಯಲಾಗಿದ್ದು, ಆರೋಪಿ ಪತಿ ಗಣೇಶ್ ಎಂಬಾತ ಜೈಲು ಪಾಲಾಗಿದ್ದಾನೆ.

ಪೊಲೀಸ್ ವಿಚಾರಣೆ ವೇಳೆ ಕೊಲೆಯನ್ನು ಗಂಡನೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ನಂತರ ಧರ್ಮಸ್ಥಳ ಪೊಲೀಸರು  ಅರೋಪಿ ಮೇಲೆ ಕೊಲೆ ಪ್ರಕರಣ ದಾಖಲಿಸಿ ನಿನ್ನೆ ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಆರು ವರ್ಷದ ಮಗುವನ್ನು ಆಗಸ್ಟ್ 30 ರಂದು ರಾತ್ರಿಯೇ ಮಂಗಳೂರು ಬೊಂದೆಲ್ ನಲ್ಲಿರುವ ಚೈಲ್ಡ್ ವೆಲ್ ಫೇರ್ ಸೆಂಟರ್ ಗೆ ಧರ್ಮಸ್ಥಳ ಪೊಲೀಸರು ಹಸ್ತಾಂತರ ಮಾಡಿದ್ದಾರೆ.

ಏನಿದು ಪ್ರಕರಣ?
ಆಗಸ್ಟ್ 30 ರಂದು ಕೊಕ್ಕಡದ ಅಗರ್ತ ಎಂಬಲ್ಲಿಯ ಗಣೇಶ್ ಗೌಡ ಎಂಬವರ ಪತ್ನಿ ಮೋಹಿನಿ ಎಂಬವರು  ಸಂಶಯಾಸ್ಪದ ರೀತಿಯಲ್ಲಿ ಬಿದ್ದು ಸಾವನ್ನಪ್ಪಿದ್ದರು.  ಮಹಿಳೆಗೆ ಕಳೆದ ಎರಡು ವರ್ಷಗಳಿಂದ ಅನಾರೋಗ್ಯವಿತ್ತು. ಅಲ್ಲದೇ ದಂಪತಿ  ಕುಡಿತದ ಚಟ ಹೊಂದಿದ್ದರು.  ರಾತ್ರಿ ಮನೆಯಲ್ಲಿ  ಒಮ್ಮೊಮ್ಮೆ ಸಣ್ಣಪುಟ್ಟ ಜಗಳಗಳು ನಡೆಯುತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು‌. ಅದರಂತೆ ಪತಿ ಗಣೇಶ್ ಗೌಡನನ್ನು ವಶಕ್ಕೆ ಪೊಲೀಸರು ವಿಚಾರಣೆ ನಡೆಸಿದಾಗ ನಿಜಾಂಶ ಬಯಲಾಗಿದೆ.

- Advertisement -

Latest News

error: Content is protected !!