Thursday, June 4, 2026
Homeಕರಾವಳಿಧರ್ಮಸ್ಥಳ: ನಾನು ರಾಗಿ ಕದ್ದಿಲ್ಲ ಎಂದು ಪ್ರಮಾಣ ಮಾಡಿದ್ದೇನೆ, ಆರೋಪ ಮಾಡಿದವರೂ ಬಂದು ಪ್ರಮಾಣ ಮಾಡಲಿ;...

ಧರ್ಮಸ್ಥಳ: ನಾನು ರಾಗಿ ಕದ್ದಿಲ್ಲ ಎಂದು ಪ್ರಮಾಣ ಮಾಡಿದ್ದೇನೆ, ಆರೋಪ ಮಾಡಿದವರೂ ಬಂದು ಪ್ರಮಾಣ ಮಾಡಲಿ; ಅರಸೀಕೆರೆ ಶಾಸಕ ಶಿವಲಿಂಗೇ ಗೌಡ ಹೇಳಿಕೆ

- Advertisement -
- Advertisement -

ಧರ್ಮಸ್ಥಳ: ನಾನು ರಾಗಿ ಕದ್ದಿಲ್ಲ ಎಂದು ಪ್ರಮಾಣ ಮಾಡಿದ್ದೇನೆ, ಆರೋಪ ಮಾಡಿದವರೂ ಬಂದು ಪ್ರಮಾಣ ಮಾಡಲಿ ಎಂದುಬಅರಸೀಕೆರೆ ಶಾಸಕ ಶಿವಲಿಂಗೇ ಗೌಡ ಧರ್ಮಸ್ಥಳದಲ್ಲಿ ಹೇಳಿಕೆ ನೀಡಿದ್ದಾರೆ.

ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಶಿವಲಿಂಗೇ ಗೌಡ ರವರು “ನಾನು ಒಂದು ಕೆ.ಜಿ.ಯೂ ರಾಗಿ ಕದ್ದಿಲ್ಲ,ಮಾರಾಟ ಮಾಡಿಲ್ಲ, ಬಿಜೆಪಿ ಮುಖಂಡ ರವಿ ಕುಮಾರ್ ನನ್ನನ್ನು ಸಾರ್ವಜನಿಕ ವೇದಿಕೆಯಲ್ಲಿ ರಾಗಿ ಕಳ್ಳ ಎಂದಿದ್ದರು, ಈ ವಿಚಾರವಾಗಿ ಅವರನ್ನು ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಮುಂದೆ ಆನೆ ಪ್ರಮಾಣಕ್ಕೆ ಕರೆದಿದ್ದೆ. ಆದರೆ ಅವರು ಬಂದಿಲ್ಲ. ಅದಕ್ಕೋಸ್ಕರ ಮಂಜುನಾಥ ಸ್ವಾಮಿಯ ಮುಂದೆ ನನ್ನ ಪಕ್ಷವನ್ನು ಹೇಳಿದ್ದೇನೆ”

“ರಾಜಕೀಯಕ್ಕೆ ಈ ರೀತಿಯ ಆರೋಪ ಮಾಡಿದ್ದಾರೆ, ಈ ವಿಚಾರವಾಗಿ ನಾನು ಎಲ್ಲಾ ರೀತಿಯ ಹೋರಾಟಕ್ಕೂ,ಚರ್ಚೆಗೂ ಸಿದ್ಧನಾಗಿದ್ದೆನೆ. ಆನೆ ಪ್ರಮಾಣಕ್ಕೆ ಮೊದಲು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರನ್ನು ಭೇಟಿ ಮಾಡಿದ್ದೇನೆ. ಹಾಸನ ಜಿಲ್ಲೆಯ ಕೃಷಿ ವಿಚಾರವಾಗಿ ಅವರು ನನ್ನ ಬಳಿ ಚರ್ಚೆ ನಡೆಸಿದ್ದಾರೆ ಆದರೆ ಆನೆ ಪ್ರಮಾಣದ ವಿಷಯವನ್ನು ಅವರ ಮುಂದೆ ಇಟ್ಟಿಲ್ಲ” ಎಂದಿದ್ದಾರೆ.

- Advertisement -

Latest News

error: Content is protected !!