Thursday, June 4, 2026
Homeಕರಾವಳಿಬೆಳ್ತಂಗಡಿ:ಪುಂಜಾಲಕಟ್ಟೆಯಲ್ಲಿ ಬೈಕ್ -ಬೈಕ್ ನಡುವೆ ಅಪಘಾತ : ಓರ್ವ ವಿದ್ಯಾರ್ಥಿ ಸಾವು , ಇಬ್ಬರು ಗಂಭೀರ

ಬೆಳ್ತಂಗಡಿ:ಪುಂಜಾಲಕಟ್ಟೆಯಲ್ಲಿ ಬೈಕ್ -ಬೈಕ್ ನಡುವೆ ಅಪಘಾತ : ಓರ್ವ ವಿದ್ಯಾರ್ಥಿ ಸಾವು , ಇಬ್ಬರು ಗಂಭೀರ

- Advertisement -
- Advertisement -

ಬೆಳ್ತಂಗಡಿ:  ಬೈಕ್ -ಬೈಕ್ ನಡುವೆ ಅಪಘಾತ ಸಂಭವಿಸಿ, ಓರ್ವ ವಿದ್ಯಾರ್ಥಿ ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ ವಿದ್ಯಾರ್ಥಿ ಶಫೀಕ್ ಸಾವನ್ನಪ್ಪಿದ್ದಾರೆ. ಶಫೀಕ್ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಎರಡನೇ ವರ್ಷದ ಡಿಗ್ರಿ ವಿದ್ಯಾರ್ಥಿ. ಶಫೀಕ್ ಕರಾಯದಿಂದ ಮಂಗಳೂರಿಗೆ ಹಿಮಾಲಯ ಬೈಕ್ ನಲ್ಲಿ ಹೋಗುವಾಗ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ.

ಇನ್ನೊಂದು ಬೈಕ್ ನಲ್ಲಿದ್ದವರು ಮಂಡತ್ಯಾರಿನ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುವವರ ಎನ್ನಲಾಗಿದೆ. ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!