Thursday, June 4, 2026
Homeತಾಜಾ ಸುದ್ದಿಬೃಹತ್‌ ಅವಳಿ ಕಟ್ಟಡ ಹತ್ತು ಸೆಕೆಂಡ್‌ಗಳಲ್ಲಿ ನೆಲಸಮ: ಕಟ್ಟಡದ ಧ್ವಂಸ ಕಂಡು ಸ್ಥಳೀಯರ ಸಂಭ್ರಮ

ಬೃಹತ್‌ ಅವಳಿ ಕಟ್ಟಡ ಹತ್ತು ಸೆಕೆಂಡ್‌ಗಳಲ್ಲಿ ನೆಲಸಮ: ಕಟ್ಟಡದ ಧ್ವಂಸ ಕಂಡು ಸ್ಥಳೀಯರ ಸಂಭ್ರಮ

- Advertisement -
- Advertisement -

ನೋಯ್ಡಾ: ಅಕ್ರಮವಾಗಿ ನಿರ್ಮಾಣವಾದ ಸೂಪರ್‌ಟೆಕ್‌ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆ ಇಂದು ಮಧ್ಯಾಹ್ನ ಸರಿಯಾಗಿ 2.30 ಕ್ಕೆ ನೆಲಸಮಗೊಳಿಸಲಾಯಿತು.

ಅಕ್ರಮ ಕಟ್ಟಡದ ವಿರುದ್ಧ ಧ್ವನಿ ಎತ್ತಿದ್ದ ಸ್ಥಳೀಯ ನಾಗರಿಕರು ಕಟ್ಟಡ ನೆಲಸಮವಾಗುವುದನ್ನು ಕಂಡು ಸಂಭ್ರಮಿಸಿದರು. ಬೃಹತ್ ಅವಳಿ ಕಟ್ಟಡಗಳು ನೆಲಸಮಗೊಳ್ಳುತ್ತಿದ್ದಂತೆಯೇ ಸ್ಥಳದಲ್ಲಿ ಭಾರಿ ಶಬ್ದದೊಂದಿಗೆ ದಟ್ಟ ಹೊಗೆ ಆವರಿಸಿತು.

ದೆಹಲಿಯ ಇತಿಹಾಸ ಪ್ರಸಿದ್ಧ ಕುತುಬ್ ಮಿನಾರ್‌ಗಿಂತಲೂ ಎತ್ತರವಾದ ಈ ಕಟ್ಟಡಗಳನ್ನು ಕೇವಲ 15 ಸೆಕೆಂಡುಗಿಂತಲೂ ಕಡಿಮೆ ಅವಧಿಯಲ್ಲಿ ವಾಟರ್‌ಫಾಲ್ ಇಂಪ್ಲೋಷನ್ ತಂತ್ರಜ್ಞಾನದ ಮೂಲಕ ನೆಲಸಮ ಮಾಡಲಾಯಿತು.

- Advertisement -

Latest News

error: Content is protected !!