Friday, June 5, 2026
Homeಕರಾವಳಿಉಡುಪಿಕುಂದಾಪುರ ತಾಲೂಕಿನ ಸಿದ್ದಾಪುರ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ

ಕುಂದಾಪುರ ತಾಲೂಕಿನ ಸಿದ್ದಾಪುರ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ

- Advertisement -
- Advertisement -

ಬೆಂಗಳೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ವ್ಯಾಪ್ತಿಯಲ್ಲಿನ ಅಜ್ರೆ, ಕೊಡ್ಲಾಡಿ, ಅಂಪಾರು, ಕರ್ಕುಂಜೆ, ಸಿದ್ದಾಪುರ ಹಾಗೂ ಇತರೆ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಿದ್ದಾಪುರ ಏತ ನೀರಾವರಿ ಯೋಜನೆಗೆ ಇಂದು ರಾಜ್ಯ ಸಚಿವ ಸಂಪುಟ ತನ್ನ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಸಿದ್ದಾಪುರ, ಅಂಪಾರು, ಅಜ್ರಿ ಮತ್ತು ಕೊಡ್ಲಾಡಿ ಗ್ರಾಮಗಳ ಪ್ರದೇಶವು ವಾರಾಹಿ ಬಲದಂಡೆ ನಾಲೆಯ ಬಲ ಭಾಗದಲ್ಲಿ ಬರುವುದರಿಂದ ನೀರಾವರಿ ಸೌಲಭ್ಯದಿಂದ ವಂಚಿತವಾಗಿತ್ತು.

ಈ ಪ್ರದೇಶದ ಬಹುಭಾಗವು ಕೃಷಿ ಭೂಮಿಯಾಗಿದ್ದು, ನೀರಾವರಿಯು ಅಗತ್ಯವಾಗಿರುವುದರಿಂದ, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ನೀರಾವರಿ ಸೌಲಭ್ಯವನ್ನು ಒದಗಿಸುವಂತೆ ಒತ್ತಾಯಿಸಿದ್ದರು.

ಆದ್ದರಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

- Advertisement -

Latest News

error: Content is protected !!