- Advertisement -
![]()
- Advertisement -
ಬೆಂಗಳೂರು: ಕರ್ನಾಟಕದ ಮನೆಮಾತಾದ ‘ಜೊತೆಜೊತೆಯಲಿ’ ಧಾರಾವಾಹಿಯ ನಾಯಕ ನಟ ಅನಿರುದ್ಧ್ ಹಾಗೂ ನಿರ್ದೇಶಕ ಆರೂರು ಜಗದೀಶ್ ಮತ್ತು ವಾಹಿನಿ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಅನಿರುದ್ಧ್‌ರನ್ನ ಕಿರುತೆರೆಯಿಂದಲೇ ಎರಡು ವರ್ಷ ಬ್ಯಾನ್ ಮಾಡಲಾಗಿದೆ.
ಈ ಮಧ್ಯೆ ಅನಿರುದ್ಧ್ ಅವರು ನಿರ್ವಹಿಸುತ್ತಿದ್ದ ಪಾತ್ರಕ್ಕೆ ವಿಕ್ರಾಂತ್ ರೋಣ, ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿಯನ್ನು ಚಾನೆಲ್ ಕರೆತರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ನಿರ್ದೇಶಕರು ಮತ್ತು ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಸಿಗಬೇಕಿದೆ.
- Advertisement -


