Wednesday, June 3, 2026
Homeಕರಾವಳಿಉಡುಪಿಉಡುಪಿ: ಜಿಲ್ಲೆಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ: ನಾಳೆ ವಿಟ್ಲಪಿಂಡಿ ಉತ್ಸವ

ಉಡುಪಿ: ಜಿಲ್ಲೆಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ: ನಾಳೆ ವಿಟ್ಲಪಿಂಡಿ ಉತ್ಸವ

- Advertisement -
- Advertisement -

ಉಡುಪಿ: ಕೃಷ್ಣನಗರಿಯಲ್ಲಿ ಇಂದು ನಾಡಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿ ನೆರವೇರುತ್ತಿದ್ದು, ನಾಳೆ ವಿಟ್ಲಪಿಂಡಿ ಉತ್ಸವಕ್ಕೆ ನಡೆಯಲಿದೆ. ಇನ್ನು ಮೊಸರು ಕುಡಿಕೆ ಉತ್ಸವ ನೋಡುವುದಕ್ಕೆಂದೇ ಉಡುಪಿ ಮಾತ್ರವಲ್ಲದೇ ನಾನಾ ಭಾಗಗಳಿಂದ ಸಾವಿರಾರು ಮಂದಿ ಸೇರಿದ್ದಾರೆ. ಕೊರೋನಾ ಕಾರಣದಿಂದ ಎರಡು ವರ್ಷಗಳಲ್ಲಿ ಸರಳವಾಗಿ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ ಆಚರಿಸಲಾಗಿತ್ತು. ಈ ವರ್ಷ ಅದ್ಧೂರಿಯಾಗಿ ನಡೆಯುತ್ತಿದೆ.  

ಶ್ರೀ ಕೃಷ್ಣ ಮಠದಲ್ಲಿ ದೇವರಿಗೆ ವಿಶೇಷ ಪೂಜೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಇಂದು ಬೆಳಗ್ಗೆ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಲಕ್ಷತುಳಸಿ ಅರ್ಚನೆ ನಡೆಸಿ ,ಮಹಾಪೂಜೆ ನೆರವೇರಿಸಲಿದ್ದಾರೆ.

- Advertisement -

Latest News

error: Content is protected !!