Thursday, June 4, 2026
Homeಕರಾವಳಿಉಡುಪಿಕಟಪಾಡಿ: ಚಾಲಕನ ನಿಯಂತ್ರಣ ತಪ್ಪಿ ಟಿಕ್ಕಾ ಹಟ್‌ನೊಳಗೆ ನುಗ್ಗಿದ ಕಾರು: ಇಬ್ಬರಿಗೆ ಗಾಯ

ಕಟಪಾಡಿ: ಚಾಲಕನ ನಿಯಂತ್ರಣ ತಪ್ಪಿ ಟಿಕ್ಕಾ ಹಟ್‌ನೊಳಗೆ ನುಗ್ಗಿದ ಕಾರು: ಇಬ್ಬರಿಗೆ ಗಾಯ

- Advertisement -
- Advertisement -

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ ೬೬ ರ ಸರ್ವಿಸ್‌ ರಸ್ತೆಯಲ್ಲಿ ನಿಂತಿದ್ದ ಕಾರೊಂದಕ್ಕೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಟಿಕ್ಕಾ ಹಟ್‌ನೊಳಗೆ ನುಗ್ಗಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಉಡುಪಿ ಸಮೀಪದ ಕಟಪಾಡಿ ಜಂಕ್ಷನ್ ನಲ್ಲಿ ಅಪಘಾತ ಸಂಭವಿಸಿದ್ದು ಇಬ್ಬರು ಗಾಯಗೊಂಡಿದ್ದಾರೆ. ಉಡುಪಿಯಿಂದ ಕಟಪಾಡಿ ಮೂಲಕ ಮಂಚಕಲ್ ಕಡೆ ಹೋಗುತ್ತಿದ್ದ ಮಹೇಂದ್ರಾ ಕಾರು ಕಟಪಾಡಿ ಜಂಕ್ಷನ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಚಾಲಕನ ನಿಯಂತ್ರ ತಪ್ಪಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಪಕ್ಕದಲ್ಲೇ ಇದ್ದ ಟಿಕ್ಕಾ ಹಟ್‌ನೊಳಗೆ ನುಗ್ಗಿದೆ. ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮತ್ತು ಹೊಟೇಲಿನಲ್ಲಿದ್ದ ಓರ್ವನಿಗೆ ಗಾಯಗಳಾಗಿವೆ‌. ಡಿಕ್ಕಿಯ ರಭಸಕ್ಕೆ ಎರಡು ಕಾರುಗಳು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ರಾಯಲ್ ಹಟ್ ಹೋಟೆಲಿಗೆ ಅಪಾರ ನಷ್ಟ ಉಂಟಾಗಿದೆ.

- Advertisement -

Latest News

error: Content is protected !!