Saturday, June 6, 2026
Homeಕೊಡಗುಸಿದ್ದರಾಮಯ್ಯ ವಿರುದ್ಧ ಮಡಿಕೇರಿಯಲ್ಲಿ ತೀವ್ರ ಪ್ರತಿಭಟನೆ: ಬಿಜೆಪಿ ಕಾರ್ಯಕರ್ತರಿಂದ ಕಾರಿಗೆ ಮೊಟ್ಟೆ ಎಸೆಯಲು ಯತ್ನ

ಸಿದ್ದರಾಮಯ್ಯ ವಿರುದ್ಧ ಮಡಿಕೇರಿಯಲ್ಲಿ ತೀವ್ರ ಪ್ರತಿಭಟನೆ: ಬಿಜೆಪಿ ಕಾರ್ಯಕರ್ತರಿಂದ ಕಾರಿಗೆ ಮೊಟ್ಟೆ ಎಸೆಯಲು ಯತ್ನ

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಡಿಕೇರಿಯಲ್ಲಿ ತೀವ್ರ ಪ್ರತಿಭಟನೆ ನಡೆದಿದೆ.

ಕೊಡಗು ಜಿಲ್ಲಾ‌ ಬಿಜೆಪಿ ಯುವ ಮೋರ್ಚಾದಿಂದ‌ ಪ್ರತಿಭಟನೆ ನಡೆದಿದ್ದು, ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಪ್ಪು ಬಾವುಟ ಹಿಡಿದು ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಲಾಗಿದೆ.

ಸಿದ್ದರಾಮಯ್ಯ ಬ್ಯಾನರ್ ಹರಿದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ ವಿರುದ್ಧವೂ ಬಿಜೆಪಿ ಕಾರ್ಯಕರ್ತರು ಆಕ್ರೋಶ ತೋರ್ಪಡಿಸಿದ್ದಾರೆ.

ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು‌ ಮುಖಾಮುಖಿಯಾಗಿದ್ದಾರೆ. ಪರಸ್ಪರ ಧಿಕ್ಕಾರ ಕೂಗಿ ಮೊಟ್ಟೆ ಎಸೆತ ನಡೆದಿದ್ದು, ಸಿದ್ದರಾಮಯ್ಯ ಕಾರಿಗೂ ಮೊಟ್ಟೆ ಎಸೆಯಲು ಯತ್ನ ನಡೆಸಲಾಗಿದೆ. ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ತೀವ್ರ ತಳ್ಳಾಟ ಕೂಡಾ ನಡೆದಿದೆ.

- Advertisement -

Latest News

error: Content is protected !!