- Advertisement -
- Advertisement -
ಉಡುಪಿ: ಉಡುಪಿ ನಗರದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಅಳವಡಿಸಲಾಗಿರುವ ವೀರ ಸಾವರ್ಕರ್ ಕಟೌಟ್ ಅನ್ನು ತೆರವುಗೊಳಿಸುವಂತೆ ಮನವಿ ಸಲ್ಲಿಕೆಯಾಗಿದೆ.ಕಟೌಟ್ ತೆರವುಗೊಳಿಸುವಂತೆ ಕಾಂಗ್ರೆಸ್ ಪಕ್ಷದಿಂದ ನಿನ್ನೆ ಪೊಲೀಸರಿಗೆ ಮನವಿ ಸಲ್ಲಿಸಲ್ಪಟ್ಟಿದೆ.
ಕಟೌಟ್ ಅಳವಡಿಕೆಗೆ ನಗರಸಭೆಯಿಂದ ಪರವಾನಿಗೆ ಪಡೆದಿರುವುದಾಗಿ ಪೊಲೀಸರ ಹೇಳಿದ್ದು, ಪ್ರಮೋದ್ ಉಚ್ಚಿಲ್, ಯೋಗೀಶ್, ಶೈಲೇಶ್ ಎಂಬವರ ಹೆಸರಿನಲ್ಲಿ ಕಟೌಟ್ ಪರವಾನಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದೇ ವೇಳೆ ಉಡುಪಿ ನಗರಸಭೆ ಪೌರಾಯುಕ್ತರಿಗೆ ಕೂಡಾ ಕಾಂಗ್ರೆಸ್ ನಾಯಕರು ಮನವಿ ಪತ್ರ ಸಲ್ಲಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿರುವ ಸಾವರ್ಕರ್ ಕಟೌಟ್ ಅಳವಡಿಕೆಗೆ ಅವಕಾಶ ಕೊಡಬೇಡಿ ಎಂದು ಮನವಿ ಸಲ್ಲಿಸಲ್ಪಟ್ಟಿದೆ
- Advertisement -