Saturday, June 6, 2026
Homeತಾಜಾ ಸುದ್ದಿಮಂಗಳೂರು: ಹಂತಕ ಪ್ರವೀಣ್‌ ಕುಮಾರ್‌ಗಿಲ್ಲ ಬಿಡುಗಡೆ ಭಾಗ್ಯ: ಕುಟುಂಬಸ್ಥರ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ

ಮಂಗಳೂರು: ಹಂತಕ ಪ್ರವೀಣ್‌ ಕುಮಾರ್‌ಗಿಲ್ಲ ಬಿಡುಗಡೆ ಭಾಗ್ಯ: ಕುಟುಂಬಸ್ಥರ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ

- Advertisement -
- Advertisement -

ಮಂಗಳೂರು : 90ರ ದಶಕದಲ್ಲಿ ಕರಾವಳಿಯನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣದಲ್ಲಿ ಸುದೀರ್ಘ 28 ವರ್ಷಗಳ ಜೈಲು ವಾಸದಲ್ಲಿದ್ದ ಪ್ರವೀಣ್ ಕುಮಾರ್  ಬಿಡುಗಡೆಯಾಗಿಲ್ಲ ಎಂದು ಹತ್ಯೆಯಾದವರ ಕುಟುಂಬಸ್ಥರು ತಿಳಿಸಿದ್ದಾರೆ.

ವಾಮಂಜೂರಿನಲ್ಲಿ 28 ವರ್ಷಗಳ ಹಿಂದೆ ಚಿನ್ನಕ್ಕಾಗಿ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಪ್ರವೀಣ್‌ ಕುಮಾರ್‌ ಕೊಲೆ ಮಾಡಿ ಜೈಲು ಸೇರಿದ್ದಾನೆ. ಈತನ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಟುಂಬಸ್ಥರು ಪೊಲೀಸ್ ಅಧಿಕಾರಿಗಳೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇವೆ. ಈಗಾಗಲೇ ರಾಜ್ಯದ ಗೃಹ ಸಚಿವರು ಕೂಡ ಹಂತಕ ಪ್ರವೀಣ್‌ನನ್ನು ಬಿಡುಗಡೆ ಮಾಡುವುದಿಲ್ಲ ಎನ್ನುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!