Saturday, June 13, 2026
Homeಕರಾವಳಿಮಂಗಳೂರು: ಅಪಾಯಕ್ಕೆ ಆಹ್ವಾನ‌ ನೀಡುತ್ತಿರುವ ಕಾಲು ಸಂಕಗಳ ಬಗ್ಗೆ ಮಾಹಿತಿ ನೀಡಲು ಡಿಸಿ‌ ಸೂಚನೆ

ಮಂಗಳೂರು: ಅಪಾಯಕ್ಕೆ ಆಹ್ವಾನ‌ ನೀಡುತ್ತಿರುವ ಕಾಲು ಸಂಕಗಳ ಬಗ್ಗೆ ಮಾಹಿತಿ ನೀಡಲು ಡಿಸಿ‌ ಸೂಚನೆ

- Advertisement -
- Advertisement -

ಮಂಗಳೂರು : ಉಡುಪಿಯಲ್ಲಿ ಕಾಲು ಸಂಕದಿಂದ ಬಿದ್ದು ಬಾಲಕಿ‌ ನೀರು ಪಾಲಾದ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ದಕ ಜಿಲ್ಲಾಡಳಿತ ಜಿಲ್ಲೆಯಲ್ಲಿರುವ ಎಲ್ಲ ಅಪಾಯಕಾರಿ ಕಾಲುಸಂಕಗಳನ್ನು ಪಟ್ಟಿ ಮಾಡುವಂತೆ ಆದೇಶಿಸಿದೆ.

ಈ ಬಗ್ಗೆ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಎಲ್ಲ ನಗರ ಮತ್ತು ಗ್ರಾಮೀಣ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಆದೇಶಿಸಿದ್ದಾರೆ.

ಆ.15ರ ಮೊದಲು ಕಾಲು ಸಂಕಗಳ ಪಟ್ಟಿ ನೀಡುವಂತೆ ಆದೇಶಿಸಲಾಗಿದೆ ಎಂದು ಡಿ.ಸಿ. ತಿಳಿಸಿದ್ದಾರೆ. ವಿದ್ಯಾರ್ಥಿಗಳು ಬಳಸುತ್ತಿರುವ ಎಲ್ಲ ಕಾಲುಸಂಕಗಳನ್ನು ಕೂಡ ಸ್ಪಷ್ಟವಾಗಿ ನಮೂದಿಸಬೇಕು, ಇದರಿಂದ ಆದ್ಯತೆ ಮೇರೆಗೆ ಮುಂದೆ ಕ್ರಮಕೈಗೊಳ್ಳಲು ಸಹಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

- Advertisement -

Latest News

error: Content is protected !!