Thursday, June 4, 2026
Homeಕರಾವಳಿಉಡುಪಿಉಡುಪಿ:ಗೆಳೆಯನ ಹುಟ್ಟುಹಬ್ಬಕ್ಕೆ ಹೋಗುವುದಾಗಿ ಹೇಳಿ ಹೋದ ಬಾಲಕ ನಾಪತ್ತೆ

ಉಡುಪಿ:ಗೆಳೆಯನ ಹುಟ್ಟುಹಬ್ಬಕ್ಕೆ ಹೋಗುವುದಾಗಿ ಹೇಳಿ ಹೋದ ಬಾಲಕ ನಾಪತ್ತೆ

- Advertisement -
- Advertisement -

ಉಡುಪಿ: ಗೆಳೆಯನ ಹುಟ್ಟುಹಬ್ಬಕ್ಕಾಗಿ ಮಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋದ ಬಾಲಕ ಮನೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿರುವ ಘಟನೆ ಮಣಿಪಾಲದ ವಿ.ಪಿ.ನಗರದಲ್ಲಿ ನಡೆದಿದೆ. ವಿ.ಪಿ.ನಗರದ ಇಂದುಮತಿ ಎಂಬವರ ಮಗ ಪ್ರಜ್ವಲ್ ಭುಯಾನ್ (17) ನಾಪತ್ತೆಯಾದ ಬಾಲಕ.

ಈತ ತನ್ನ ಗೆಳೆಯನ ಹುಟ್ಟುಹಬ್ಬದ ಹಿನ್ನೆಲೆ ಮಂಗಳೂರಿಗೆ ಹೋಗುವುದಾಗಿ ಹೇಳಿ ಬ್ಯಾಗ್ ಮತ್ತು 3000 ರೂ. ವನ್ನು ತೆಗೆದುಕೊಂಡು ಆಗಸ್ಟ್ 9 ರಂದು ಬೆಳಗ್ಗೆ ಹೋಗಿದ್ದ. ಆದರೆ ಈವರೆಗೆ ಮನೆಗೆ ವಾಪಾಸ್ ಬಂದಿಲ್ಲ. ಹುಟ್ಟುಹಬ್ಬಕ್ಕೂ ಹೋಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!