Wednesday, June 3, 2026
HomeUncategorizedಮದುವೆಗೆ ಮುಂಚೆಯೇ ಅಪ್ಪ ಆಗುವ ಮೂಲಕ ಶಾಕ್ ನೀಡಿದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ !

ಮದುವೆಗೆ ಮುಂಚೆಯೇ ಅಪ್ಪ ಆಗುವ ಮೂಲಕ ಶಾಕ್ ನೀಡಿದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ !

- Advertisement -
- Advertisement -

ಕಳೆದ ಜನವರಿಯಲ್ಲಿ ಬಾಲಿವುಡ್‌ ಬೆಡಗಿ ಹಾಗೂ ಕನ್ನಡದ ‘ದನಾಕಾಯೋನು’ ಸಿನಿಮಾದಲ್ಲಿ ನಟಿಸಿದ್ದ ಸರ್ಬಿಯಾ ಮೂಲದ ನಟಿ ನತಾಶಾ ಸ್ಟ್ಯಾನ್‌ಕೊವಿಚ್‌ ಅವರೊಟ್ಟಿಗೆ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್‌ ಆಲ್‌ರೌಂಡರ್‌, ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಇದೀಗ ಮದುವೆಗೂ ಮೊದಲೇ ತಂದೆಯಾಗುತ್ತಿರುವ ಸುದ್ದಿ ಸ್ಫೋಟಿಸಿದ್ದಾರೆ.

ಈ ಜೋಡಿ ಇದುವರೆಗೂ ಅಧಿಕೃತವಾಗಿ ಮದುವೆಯಾಗಿದ್ದನ್ನು ಎಲ್ಲೂ ಬಹಿರಂಗ ಪಡಿಸದಿದ್ದರೂ ಇನ್‌ಸ್ಟಾಗ್ರಾಂನಲ್ಲಿ ಸಾಂಪ್ರದಾಯಿಕ ಉಡುಗೊರೆಯಲ್ಲಿರುವ ಚಿತ್ರವನ್ನು ಪ್ರಕಟಿಸಿದೆ. ಭಾನುವಾರ ಸ್ವತಃ ಹಾರ್ದಿಕ್ ಪಾಂಡ್ಯ ಅವರೇ ಅಪ್ಪನಾಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

26 ವರ್ಷದ ಸ್ಟಾರ್‌ ಕ್ರಿಕೆಟಿಗ ಮತ್ತು 28 ವರ್ಷದ ನಟಿ ಇಬ್ಬರೂ ಏಕಕಾಲದಲ್ಲಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳ ಮೂಲಕ ಈ ಶುಭ ಸುದ್ದಿಯನ್ನು ಭಾನುವಾರ ಹಂಚಿಕೊಂಡಿದ್ದಾರೆ. ಆದರೆ, ಇಬ್ಬರ ವಿವಾಹ ಮಾತ್ರ ಇನ್ನು ನಡೆದಿಲ್ಲ. ಲಾಕ್‌ಡೌನ್‌ ಮುಗಿದ ಬಳಿಕ ಈ ಜೋಡಿ ಭವ್ಯ ಸಮಾರಂಭದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ.

- Advertisement -

Latest News

error: Content is protected !!