Monday, June 15, 2026
Homeಕರಾವಳಿಅಜ್ಜಾವರ: ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ

ಅಜ್ಜಾವರ: ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ

- Advertisement -
- Advertisement -

ಸುಳ್ಯ: ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ರವರ ನೇತೃತ್ವದಲ್ಲಿ ಅಜ್ಜಾವರ ಗ್ರಾಮದ ಮುಳ್ಯ ಪ.ಜಾತಿ ಕಾಲನಿಯ 50 ಮನೆಗಳಿಗೆ ಆಹಾರ ಸಾಮಗ್ರಿಯ ಕಿಟ್ ಗಳನ್ನು ಮೇ 31 ರಂದು ವಿತರಿಸಲಾಯಿತು. ಕೃಷಿಕರಾದ ರಾಜೇಶ್ ಭಟ್ ಎಲಿಮಲೆ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.

ಈ ಸಂದರ್ಭ ದಲ್ಲಿ ಅಜ್ಜಾವರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಸುಧೀರ್ ರೈ ಮೇನಾಲ, ಮಾಜಿ ಉಪಾಧ್ಯಕ್ಷ ಹಸೈನಾರ್ ಹಾಜಿ ಗೋರಡ್ಕ, ಮಾಜಿ ಸದಸ್ಯ ಮೋಹನ ಮುಳ್ಯ, ರಂಜಿತ್ ರೈ ಮೇನಾಲ, ರಾಧಾಕೃಷ್ಣ ಕಾಂತಮಂಗಲ, ವೆಂಕಟರಮಣ ಭಟ್ ಮುಳ್ಯ, ಶ್ರೀ ರಾಮ್ ಮುಳ್ಯ, ರಾಘವ ಮುಳ್ಯ, ಸುಂದರ ನೆಹರೂ ನಗರ, ವಿಶ್ವನಾಥ ಮೊದಲಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!