ಜನಪ್ರಿಯ ಫೈಲ್ ಶೇರಿಂಗ್ ಆಯಪ್ ವಿ-ಟ್ರಾನ್ಸ್ ಫರ್ ಅನ್ನು ಭಾರತೀಯ ದೂರ ಸಂಪರ್ಕ ಇಲಾಖೆ (ಡಿಓಟಿ) ನಿಷೇಧಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರಣ ನೀಡಿ ನಿರ್ಬಂಧ ಹೇರಲಾಗಿದೆ ಇಂಡಿಯಾ ಟುಡೇ ವರದಿ ತಿಳಿಸಿದೆ.
ದೇಶಾದ್ಯಂತ 3 ಯುಆರ್ ಎಲ್ ಗಳನ್ನು ನಿಷೇಧಿಸುವಂತೆ ಡಿಒಟಿ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನೋಟಿಸ್ ನೀಡಿದೆ. 2 ಯುಆರ್ ಎಲ್ ಗಳಿಗೆ ಕೊಂಚ ವಿನಾಯಿತಿ ಇದ್ದು ವಿ-ಟ್ರಾನ್ಸ್ ಫರ್ ಯುಆರ್ ಎಲ್ ಅನ್ನು ಸಂಪೂರ್ಣ ನಿಷೇಧಿಸಿ ಎಂದು ಈ ನೋಟಿಸ್ ನಲ್ಲಿ ಆದೇಶ ನೀಡಲಾಗಿದೆ.
WeTransfer ನೆದರ್ಲೆಂಡ್‌ನ ಅಮ್‌ಸ್ಟರ್ ಡಾಂನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಇದರಲ್ಲಿ ಸಾಮಾನ್ಯ ಸೇವೆ ಉಚಿತವಾಗಿದ್ದು, ಹೆಚ್ಚಿನ ಗಾತ್ರದ ಫೈಲ್ ಕಳುಹಿಸುವ ಪ್ರೀಮಿಯಂ ಸೇವೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಉಚಿತ ಸೇವೆಗಾದರೆ 2 ಜಿಬಿ ಮಿತಿ, ಅದಕ್ಕಿಂತ ಹೆಚ್ಚಿನ ಫೈಲ್ ಗಾತ್ರವಿದ್ದರೆ ಅದಕ್ಕೆ ಶುಲ್ಕ ವಿಧಿಸಲಾಗುತ್ತಿತ್ತು. ಅಂದರೆ, 20 ಜಿಬಿ ವರೆಗಿನ ಫೈಲ್ ಅನ್ನು ವಿ-ಟ್ರಾನ್ಸ್‌ಫರ್ ಬಳಸಿ ಕಳುಹಿಸಲು ಅವಕಾಶವಿತ್ತು.