Wednesday, June 3, 2026
Homeಕರಾವಳಿಉಡುಪಿಉಡುಪಿ: ಪತ್ನಿಗೆ ಕತ್ತಿಯಿಂದ ಕಡಿದು, ಪತಿಯಿಂದ ಜೀವ ಬೆದರಿಕೆ

ಉಡುಪಿ: ಪತ್ನಿಗೆ ಕತ್ತಿಯಿಂದ ಕಡಿದು, ಪತಿಯಿಂದ ಜೀವ ಬೆದರಿಕೆ

- Advertisement -
- Advertisement -

ಉಡುಪಿ: ಪತ್ನಿಗೆ ಕತ್ತಿಯಿಂದ ಕಡಿದು, ಪತಿ ಜೀವ ಬೆದರಿಕೆ ಹಾಕಿದ ಘಟನೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಹೊನ್ಕಲ್ ಎಂಬಲ್ಲಿ ನಡೆದಿದೆ.ಜ್ಯೋತಿ(36) ಹಲ್ಲೆಗೊಳಗಾದ ಮಹಿಳೆ.ಪತಿ ರವೀಂದ್ರ ಜ್ಯೋತಿ ಮೇಲೆ ಹಲ್ಲೆ ನಡೆಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ರವೀಂದ್ರ ಜ್ಯೋತಿ ಅವರ ಜೊತೆ ಜಗಳವಾಡಿದ್ದು, ಬಳಿಕ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಜ್ಯೋತಿ ಅವರ ಕೈಗೆ ಗಾಯವಾಗಿದ್ದು, ಅವರು ಪಕ್ಕದಲ್ಲೇ ಇದ್ದ ಅಕ್ಕನ ಮನೆಗೆ ಓಡಿದ್ದಾರೆ. ಈ ವೇಳೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲವೆಂದು ರವೀಂದ್ರ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!