Thursday, July 3, 2025
Homeಕರಾವಳಿಉಡುಪಿಉಡುಪಿ: ಮನೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರ್ ರಾಜ್ಯ ಕಳ್ಳರ ಬಂಧನ

ಉಡುಪಿ: ಮನೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರ್ ರಾಜ್ಯ ಕಳ್ಳರ ಬಂಧನ

spot_img
- Advertisement -
- Advertisement -

ಉಡುಪಿ: ಮನೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನು ಬ್ರಹ್ಮಾವರದಲ್ಲಿ ಬಂಧಿಸಲಾಗಿದೆ. ಪೊಲೀಸ್‌ ವೃತ್ತ ನಿರೀಕ್ಷಕ ಅನಂತಪದ್ಮನಾಭ ಅವರ ನೇತೃತ್ವದ ತಂಡ ಮೂವರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಬಂಧಿಸಿದೆ. ಶಿವಪುರ ಕೆರೆಬೆಟ್ಟಿನ ದಿಲೀಪ್‌ ಶೆಟ್ಟಿ, ತಮಿಳನಾಡು ಕೊಯಮುತ್ತೂರಿನ ರಾಜನ್‌ ಮತ್ತು ಷಣ್ಮುಗಂ ಬಂಧಿತರು. ಹಾವಂಜೆ ಗ್ರಾಮದ ಶೇಡಿಗುಳಿ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಸ್ಯಾಂಟ್ರೋ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನಲ್ಲಿ ಮನೆಯ ಬಾಗಿಲು ಒಡೆಯುವ ಕಬ್ಬಿಣದ ರಾಡ್‌ ಹಾಗೂ ಬೆಳ್ಳಿಯ ಆಭರಣಗಳು ಪತ್ತೆಯಾಗಿತ್ತು.

ದಿಲೀಪ್‌ ಶೆಟ್ಟಿಯು ಕುಖ್ಯಾತ ಕಳ್ಳರಾದ ರಾಜನ್‌, ಕುಟ್ಟಿ ವಿಜಯನ್‌, ಸಜಿತ್‌ ವರ್ಗಿಸ್‌ ಅವರೊಂದಿಗೆ ಸ್ಯಾಂಟ್ರೋ ಹಾಗೂ ಆಮ್ನಿ ಕಾರನ್ನು ಬಳಸಿಕೊಂಡು ಬೆಂಗಳೂರಿನಿಂದ ಆಗಮಿಸಿ ಹಾಸನ, ದ.ಕ. ಮತ್ತು ಉಡುಪಿ ಭಾಗದಲ್ಲಿ ಮನೆಗಳಲ್ಲಿ ಕಳವು ನಡೆಸುತ್ತಿದ್ದ ಎನ್ನುವುದು ಆರೋಪಿಗಳ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ದಿಲೀಪ್‌ ಶೆಟ್ಟಿ ಮತ್ತು ರಾಜನ್‌ನನ್ನು ವಿಚಾರಿಸಿದಾಗ ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ 2 ಮನೆಯಲ್ಲಿ ಕಳ್ಳತನ, ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 1 ಮನೆಯಲ್ಲಿ ಕಳ್ಳತನ ಹಾಗೂ ಅಜೆಕಾರು ಠಾಣೆ ವ್ಯಾಪ್ತಿಯಲ್ಲಿ 2 ಮನೆಯಲ್ಲಿ ಕಳ್ಳತನ ಪ್ರಕರಣಗಳ ಕುರಿತು ಬಾಯ್ಬಿಟ್ಟಿದ್ದಾರೆ. ಅವರು ವಿವಿಧ ಸೊತ್ತುಗಳು ಮತ್ತು ಚಿನ್ನಾಭರಣವನ್ನು ಕಳವು ಮಾಡಿದ್ದರು. ಇಲ್ಲಿ ಕಳವು ಮಾಡಿ ಅವರು ಬೆಂಗಳೂರು ಮತ್ತು ಕೊಯಮತ್ತೂರಿನಲ್ಲಿ ಚಿನ್ನಾಭರಣಗಳನ್ನು ಅಡವಿಡುತ್ತಿದ್ದರು. ಆ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ದಿಲೀಪ್‌ ಶೆಟ್ಟಿ ಮತ್ತು ರಾಜನ್‌ ಕಡೆಯಿಂದ ಸುಮಾರು 13 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 20,000 ರೂ. ಮೌಲ್ಯದ ಬೆಳ್ಳಿ ಆಭರಣ, ಕೃತ್ಯಕ್ಕೆ ಬಳಸಿದ್ದ 5 ಲಕ್ಷ ರೂ. ಮೌಲ್ಯದ ಸ್ಯಾಂಟ್ರೋ ಕಾರು, 2 ಲಕ್ಷ ರೂ.ನ ಆಮ್ನಿ ಕಾರು ಸೇರಿದಂತೆ ಸುಮಾರು 20 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡು, 5 ಮನೆಗಳಲ್ಲಿನ ಕಳ್ಳತನ ಪ್ರಕರಣ ಭೇದಿಸಿದ್ದಾರೆ.

- Advertisement -
spot_img

Latest News

error: Content is protected !!