Friday, June 5, 2026
Homeಕರಾವಳಿಹಳಸಿದ ಆಹಾರ ನೀಡಿದ ಆರೋಪ: ಸುರತ್ಕಲ್ ನಲ್ಲಿ ಪೊಲೀಸರ ನಡುವೆ ವಾಗ್ವಾದ

ಹಳಸಿದ ಆಹಾರ ನೀಡಿದ ಆರೋಪ: ಸುರತ್ಕಲ್ ನಲ್ಲಿ ಪೊಲೀಸರ ನಡುವೆ ವಾಗ್ವಾದ

- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಿನ್ನೆಲೆಯಲ್ಲಿ ಹೊರ ಜಿಲ್ಲೆಯಿಂದ ಕರ್ತವ್ಯಕ್ಕೆ ಬಂದಿರುವ ಪೊಲೀಸರಿಗೆ ಹಳಸಿದ ಊಟ ನೀಡಿರುವ ಆರೋಪದಿಂದಾಗಿ ಪೊಲೀಸರ ನಡುವೆ ವಾಗ್ವಾದ ನಡೆದಿದೆ.

ಸುರತ್ಕಲ್ ಬಂಟರ ಭವನನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರಿಗೆ ಹಳಸಿದ ಆಹಾರ ನೀಡಿದ್ದಾರೆ ಎಂದು
ಆಹಾರ ಸ್ವೀಕರಿಸದೇ ಪೊಲೀಸರು ವಾಪಾಸ್ ಕಳುಹಿಸಿದ್ದಾರೆ ಎನ್ನಲಾಗಿದೆ.

ದತ್ತಪೀಠ ಕರ್ತವ್ಯಕ್ಕೆ ಬಂದಾಗ ನೀವು ಹಾಗೆ ಮಾಡಿದ್ದೀರಿ, ಅದಕ್ಕೆ ನಾವು ಹಾಗೆ ಮಾಡುತ್ತಿದ್ದೇವೆ ಎಂದಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲೆಯ ಪೊಲೀಸರಿಂದ ಅರೋಪ ವ್ಯಕ್ತವಾಗಿದೆ.

ಇದರಿಂದಾಗಿ ಪೊಲೀಸರ ನಡುವೆ ಕೆಲವು ಹೊತ್ತು ವಾಗ್ವಾದ‌ ನಡೆದಿದ್ದು,
ಬಳಿಕ ಸಿಬ್ಬಂದಿ ಬೇರೆ ತಿಂಡಿ ತಂದು ಕೊಟ್ಟಿದ್ದಾರೆ.

- Advertisement -

Latest News

error: Content is protected !!