Tuesday, July 1, 2025
Homeಕರಾವಳಿಮಂಗಳೂರು: ಫಾಜಿಲ್ ಹತ್ಯೆಗೆ ಹಂತಕರು ಸ್ಕೆಚ್ ರೂಪಿಸಿದ್ದು ಹೇಗೆ?  ಸುದ್ದಿಗೋಷ್ಟಿಯಲ್ಲಿ ಕಮಿಷನರ್ ಹೇಳಿದ್ದೇನು?

ಮಂಗಳೂರು: ಫಾಜಿಲ್ ಹತ್ಯೆಗೆ ಹಂತಕರು ಸ್ಕೆಚ್ ರೂಪಿಸಿದ್ದು ಹೇಗೆ?  ಸುದ್ದಿಗೋಷ್ಟಿಯಲ್ಲಿ ಕಮಿಷನರ್ ಹೇಳಿದ್ದೇನು?

spot_img
- Advertisement -
- Advertisement -

ಮಂಗಳೂರು : ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಫಾಜಿಲ್ ಹತ್ಯೆ ಪ್ರವೀಣ್ ನೆಟ್ಟಾರು ಹತ್ಯೆಯ ರಿವೇಂಜ್ ಅನ್ನೋದು ಗೊತ್ತಾಗಿದೆ.

ಅಂದ್ಹಾಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ಕಾರು ನೀಡಿದ ಅಜಿತ್ ಕ್ರಾಸ್ತಾನನ್ನು ಬಂಧಿಸುತ್ತಿದ್ದಂತೆ ಪೊಲೀಸರಿಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗಿತ್ತು. ಅಂದ್ಹಾಗೆ ಅಜಿತ್ ಗೆ ಘಟನೆ ಬಗ್ಗೆ ಗೊತ್ತಿದ್ದರೂ ಅವರಿಗೆ ಕಾರು ಕೊಟ್ಟಿದ್ದ. ಆರೋಪಿಗಳು ಮೂರು ದಿನಕ್ಕೆ 15 ಸಾವಿರ ಕೊಡೋ ಭರವಸೆ ಕೊಟ್ಟಿದ್ದರು, ಅದರಂತೆ ಅಜಿತ್ ಹಣದ ಆಸೆಗೆ ಕಾರು ಗುರುತು ಮರೆಮಾಚಲು ಹೇಳಿ ಕಾರು ಕೊಟ್ಟಿದ್ದ.

ಇತ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗುತ್ತಿದ್ದಂತೆ ಆರೋಪಿಗಳಾದ ಸುಹಾಸ್ ಶೆಟ್ಟಿ, ಅಭಿಷೇಕ್ ಹಾಗೂ ಮೋಹನ್ ಹತ್ಯೆಗೆ ಸ್ಕೆಚ್ ಹಾಕ್ತಾರೆ. ಜು.27 ರಂದು ಸುರತ್ಕಲ್ ನ ಒಂದು ಜಾಗದಲ್ಲಿ ಅಭಿಷೇಕ್ ಮತ್ತು ಶ್ರೀನಿವಾಸ ಉಳಿದವರನ್ನ ಸೇರಿಸಿ ಸ್ಕೆಚ್ ರೂಪಿಸಿದ್ದರು. ಅದರಂತೆ 27 ರಂದು ಮಧ್ಯಾಹ್ನ ಮೋಹನ್ ಮತ್ತು ಗಿರಿಧರ್ ಕಾರು ಅಜಿತ್ ಬಳಿಯಿಂದ ತೆಗೆದುಗೊಂಡು ಬರ್ತಾರೆ.ಈ ಕಾರನ್ನು ಆರೋಪಿ ಗಿರಿಧರ್ ಡ್ರೈವ್ ಮಾಡಿಕೊಂಡು ಬರ್ತಾನೆ.

ಆ ಬಳಿಕ ಮಂಕಿಕ್ಯಾಪ್ ರೆಡಿ ಮಾಡಿ ಸುರತ್ಕಲ್ ಹೊರವಲಯದ ಕ್ಯಾಂಟೀನ್ ನಲ್ಲಿ ಕೂತು ಮಾತಾಡ್ತಾರೆ. ಆ ಬಳಿಕ ಕಿ‌ನ್ನಿಗೋಳಿ ಬಾರ್ ನಲ್ಲಿ ಊಟ ಮಾಡಿ ಹತ್ಯೆಗೆ ಬೇಕಾದ ಸಿದ್ಧತೆ ಮಾಡಿಕೊಂಡು, ಹತ್ಯೆ ನಡೆದ ಜಾಗದಲ್ಲಿ ಮೂರು‌ ಬಾರಿ ಓಡಾಡಿ ಎಲ್ಲವನ್ನೂ ಪರಿಶೀಲಿಸಿದ್ದರು. ಬಳಿಕ ಶ್ರೀನಿವಾಸ್, ಮೋಹನ್ ಮತ್ತು ಸುಹಾಸ್ ಮಾರಕಾಸ್ತ್ರ ಹಿಡಿದು ಕಾರಿನಿಂದ ಇಳಿದು ಫಾಜಿಲ್ ಮೇಲೆ ದಾಳಿ ಮಾಡಿದ್ದಾರೆ.

ಹತ್ಯೆ ನಡೆಯುವ ವೇಳೆ ಗಿರಿಧರ್ ಕಾರು‌ ಚಾಲನೆ ಮಾಡುತ್ತಿದ್ದ.  ದೀಕ್ಷಿತ್ ಕಾರಿನಲ್ಲೇ ಕುಳಿತಿದ್ದ.  ಇನ್ನು ಅಭಿಷೇಕ್ ಕಾರಿನಿಂದ ಇಳಿದು ಸುತ್ತಮುತ್ತ ಗಮನಿಸುತ್ತಿದ್ದ. ಫಾಜಿಲ್ ಮೇಲೆ ದಾಳಿ ಆಗುತ್ತಿದ್ದಂತೆ ಕಾರು ಹತ್ತಿದ ಆರೋಪಿಗಳನ್ನು ಕಾರನ್ನು ಕಾರ್ಕಳದ ಇನ್ನಾ ಎಂಬಲ್ಲಿಗೆ ತಂದು ನಿಲ್ಲಿಸಿದ್ದಾರೆ. ಬಳಿಕ ಅಲ್ಲಿಂದ  ಮತ್ತೊಬ್ಬನ ಮೂಲಕ ಮತ್ತೊಂದು ಕಾರು ತರಿಸಿ ಎಸ್ಕೇಪ್ ಆಗಿದ್ದಾರೆ. ನಿನ್ನೆ ಆರೋಪಿಗಳು ರಾತ್ರಿ ಎರಡು ಗಂಟೆ ವೇಳೆದೆ ಉಡುಪಿಯ ಉದ್ಯಾವರ ಬಳಿ ಬಂಧಿಸಿದ್ದಾರೆ.ಸದ್ಯ ಆರೂ ಆರೋಪಿಗಳನ್ನು ಪೊಲೀಸರು ಕೋರ್ಟ್ ಹಾಜರು ಪಡಿಸಿದ್ದಾರೆ.

ಇನ್ನು ಫೌಜಿಲ್ ನನ್ನು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ  ಕೊಲೆ ಮಾಡಲಾಗಿದೆ ಎಂದು ಸುದ್ದಿ ಹರಡಿತ್ತು.ಆದರೆ ಇದು ಅವನ ವೈಯಕ್ತಿಕ ವಿಚಾರಕ್ಕೆ ‌ನಡೆದ ಹತ್ಯೆ ಅಲ್ಲ. ಪ್ರೇಮ ಪ್ರಕರಣ ಅಥವಾ ಒಳಪಂಗಡದ ಗಲಾಟೆಗೆ ನಡೆದ ಹತ್ಯೆ ಅಲ್ಲ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ. ಪ್ರಕರಣ ನಡೆದ ‌ಬಳಿಕ ಕೆಲ ರೌಡಿಶೀಟರ್ ಗಳು ನಾವೇ ಅಂತ ಹೇಳಿಕೊಂಡು ತಿರುಗಾಡಿದ್ದಾರೆ.ಇವರ ಬಗ್ಗೆ ಮುಂದಿನ ದಿನಗಳಲ್ಲಿ ವಿಚಾರಣೆ ‌ನಡೆಸಲಾಗುವುದು ಎಂದಿದ್ದಾರೆ,

- Advertisement -
spot_img

Latest News

error: Content is protected !!