Thursday, June 4, 2026
Homeತಾಜಾ ಸುದ್ದಿಸಿಎಂ ಕಾರು ನಿಲ್ಲಿಸಿ ಹೂ ಗುಚ್ಚ ನೀಡಿ ಅಭಿನಂದಿಸಿದ ಗ್ರಾಮ ಒನ್ ಸಿಬ್ಬಂದಿ

ಸಿಎಂ ಕಾರು ನಿಲ್ಲಿಸಿ ಹೂ ಗುಚ್ಚ ನೀಡಿ ಅಭಿನಂದಿಸಿದ ಗ್ರಾಮ ಒನ್ ಸಿಬ್ಬಂದಿ

- Advertisement -
- Advertisement -

ಕೊಪ್ಪಳ: ಸಿಎಂ ಬಸವರಾಜ ಬೊಮ್ಮಾಯಿ‌ ಅವರ ಕಾರನ್ನು ನಿಲ್ಲಿಸಿ ಗ್ರಾಮ ವನ್ ಸಿಬ್ಬಂದಿ ಅಭಿನಂದಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಇಂದು ಸಿಎಂ ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿದ್ದ ವೇಳೆ ಕೊಪ್ಪಳದ ಗವಿಮಠದಿಂದ ನಿರ್ಗಮಿಸುವ ವೇಳೆ ರಸ್ತೆ ಬದಿ ಕಾದು ನಿಂತಿದ್ದ ಗ್ರಾಮ ಒನ್ ಸಿಬ್ಬಂದಿಯನ್ನು ಕರೆದು ಸಿಎಂ ಮಾತನಾಡಿಸಿದರು.

ಈ ವೇಳೆ ಸಿಎಂ ಕಾರಿಗೆ ಅಡ್ಡಲಾಗಿ ಹೋದ ಗ್ರಾಮ ಒನ್ ಸಿಬ್ಬಂದಿಯನ್ನು ಪೊಲೀಸರು ತಡೆದರೂ ಸಿಎಂ ಗೆ ಹೂಗುಚ್ಛ ನೀಡಿ ಗ್ರಾಮ ಒನ್ ಸಿಬ್ಬಂದಿ ಅಭಿನಂದಿಸಿದರು.‌

ಇದೇ ವೇಳೆ ದಾರಿಯಲ್ಲಿ ನಿಂತಿದ್ದ ಬಾಲಕಿಯನ್ನು ಕರೆದು ಮಾತನಾಡಿಸಿದ ಸಿಎಂ ಬೊಮ್ಮಾಯಿ‌ ಚೆನ್ನಾಗಿ ಓದು ಎಂದು ಹೇಳಿದರು‌.

ಈ ಘಟನೆಯಿಂದ ಸಿಎಂ ಬೆಂಗಾವಲು ಸಿಬ್ಬಂದಿ ಕ್ಷಣ ಕಾಲ ಆತಂಕಕ್ಕೆ ಒಳಗಾಗಬೇಕಾಯಿತು.

- Advertisement -

Latest News

error: Content is protected !!