Saturday, June 13, 2026
Homeಕರಾವಳಿಕಾಸರಗೋಡಿನ ಯುವಕ ಅಬುಧಾಬಿಯಲ್ಲಿ ಕಟ್ಟಡದಿಂದ ಬಿದ್ದು ಸಾವು

ಕಾಸರಗೋಡಿನ ಯುವಕ ಅಬುಧಾಬಿಯಲ್ಲಿ ಕಟ್ಟಡದಿಂದ ಬಿದ್ದು ಸಾವು

- Advertisement -
- Advertisement -

ಕಾಸರಗೋಡು; ಅಬುಧಾಬಿಯಲ್ಲಿ ಕಾಸರಗೋಡಿನ ಯುವಕನೊಬ್ಬ ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪಾಣತ್ತೂರು ಪನತ್ತಡಿಯ ಮುಹಮ್ಮದ್ ಶಮೀಮ್ (24) ಮೃತ ಯುವಕ.

ಶಮೀಮ್ ಅಬುಧಾಬಿ ಸಿಟಿ ವಿಮಾನ ನಿಲ್ದಾಣ ಸಮೀಪದ ಮಳಿಗೆಯೊಂದರಲ್ಲಿ ಕೆಲಸಮಾಡುತ್ತಿದ್ದರು. ನಿನ್ನೆ ಮುಂಜಾನೆ ಕೆಲಸ ಮುಗಿಸಿ ರೂಂಗೆ ತೆರಳುವಾಗ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ. ಶಮೀಮ್ ಒಂದು ವರ್ಷದ ಹಿಂದೆ ರಜೆಯಲ್ಲಿ ಬಂದು ಮತ್ತೆ ಆಬುಧಾಬಿಗೆ ತೆರಳಿದ್ದರು.

- Advertisement -

Latest News

error: Content is protected !!