Sunday, October 25, 2026
Homeಕರಾವಳಿಸುಳ್ಯ:ಪ್ರವೀಣ್ ನೆಟ್ಟಾರು ನಿವಾಸಕ್ಕೆ ಶೋಭಾ ಕರಂದ್ಲಾಜೆ ಭೇಟಿ:  ಕುಟುಂಬಸ್ಥರಿಗೆ ಐದು ಲಕ್ಷ ನಗದು ವಿತರಿಸಿದ ಕೇಂದ್ರ...

ಸುಳ್ಯ:ಪ್ರವೀಣ್ ನೆಟ್ಟಾರು ನಿವಾಸಕ್ಕೆ ಶೋಭಾ ಕರಂದ್ಲಾಜೆ ಭೇಟಿ:  ಕುಟುಂಬಸ್ಥರಿಗೆ ಐದು ಲಕ್ಷ ನಗದು ವಿತರಿಸಿದ ಕೇಂದ್ರ ಸಚಿವೆ

- Advertisement -
- Advertisement -

ಸುಳ್ಯ: ದಿವಂಗತ‌ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಇಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಕುಟುಂಸ್ಥರಿಗೆ ಸಾಂತ್ವನ ಹೇಳಿದರು,

ಇದೇ ವೇಳೆ ಪ್ರವೀಣ್ ಕುಟುಂಬಸ್ಥರು ಸಚಿವೆ ಶೋಭಾ ಕರಂದ್ಲಾಜೆ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದರು. ಇದೇ ವೇಳೆ ನ್ಯಾಯ ದೊರಕಿಸುವ ಭರವಸೆಯನ್ನು ನೀಡಿದರು. ಬಳಿಕ ಕುಟುಂಬಸ್ಥರಿಗೆ ಐದು ಲಕ್ಷ ರೂಪಾಯಿ ನಗದು, ಅವರ ಒಂದು ತಿಂಗಳ ಸಂಬಳ ಹಾಗೂ ಚೆಕ್ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಸಾವು ನಮಗೆಲ್ಲರಿಗೂ ದುಃಖ ತಂದಿದೆ. ಅಮಾಯಕರ ಸಾವು ನೋವುಂಟು ತಂದಿದೆ. ಪ್ರೀತಿಯಿಂದ ಬದುಕುತ್ತಿದ್ದ ಪ್ರವೀಣ್ ಇಂದು ನಮ್ಮೊಂದಿಗೆ ಇಲ್ಲ. ಸಮಸ್ಯೆ ಆದಾಗ ಪ್ರವೀಣ್ ಸ್ಪಂದಿಸುತ್ತಿದ್ದರು. ಹತ್ಯೆಯಾದಾಗ ನಾನು ದೆಹಲಿಯಲ್ಲಿ ಇದ್ದೆ. ಕೇರಳ ಮಾದರಿಯಲ್ಲಿ ಪ್ರವೀಣ್ ಕೊಲೆಯನ್ನು ಮಾಡಿದ್ದಾರೆ. NIA ತನಿಖೆಗೆ ನಡೆಸಲು ನೀಡಿದ್ದಾರೆ. ಈ ತನಿಖೆಯಲ್ಲಿ ನಿಜವಾದ ಆರೋಪಿಗಳು ಸಿಗುತ್ತಾರೆ, ಕಠಿಣ ಶಿಕ್ಷೆಯಾಗುತ್ತದೆ ಎಂದು ತಿಳಿಸಿದರು

- Advertisement -

Latest News

error: Content is protected !!