Friday, June 5, 2026
Homeಕರಾವಳಿನೆಲ್ಯಾಡಿ: ಯುವಕನನ್ನು ಹುಡುಕಿಕೊಂಡು ಬಂದು ಅಸ್ವಸ್ಥವಾದ ಮಹಿಳೆ

ನೆಲ್ಯಾಡಿ: ಯುವಕನನ್ನು ಹುಡುಕಿಕೊಂಡು ಬಂದು ಅಸ್ವಸ್ಥವಾದ ಮಹಿಳೆ

- Advertisement -
- Advertisement -

ನೆಲ್ಯಾಡಿ: ಯುವಕನನ್ನು ಹುಡುಕಿಕೊಂಡು ಬಂದ ಮಹಿಳೆಯೊಬ್ಬರು ಅಸ್ವಸ್ಥವಾಗಿರುವ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ನೆಲ್ಯಾಡಿ ಮೂಲದ ಯುವಕನಿಗೆ ಮಂಗಳೂರಿನ ವಿವಾಹಿತ ಮಹಿಳೆಯೊಬ್ಬರ ಪರಿಚಯವಿತ್ತು. ಇಬ್ಬರ ನಡುವೆ ಗಾಢವಾದ ಸಂಬಂಧವಿತ್ತು. ಆದರೆ ಎರಡು ತಿಂಗಳ ಹಿಂದೆ ಊರಿಗೆ ಬಂದ ಯುವಕ ಮಹಿಳೆಯ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಆತನನ್ನು ಹುಡುಕಿಕೊಂಡು ಯುವಕ ನೆಲ್ಯಾಡಿಗೆ ಬಂದಿದ್ದಾರೆ.

ಯುವಕನ ಮನೆ ಬಳಿಗೆ ಬಂದ ಆಕೆಯನ್ನು ಒಳಗೆ ಹೋಗಲು ಆತನ ಮನೆಯವರು ಬಿಡಲಿಲ್ಲ. ಹಾಗಾಗಿ ಮನೆ ಬಳಿ 2 ಗಂಟೆಗಿಂತ ಹೆಚ್ಚು ಕಾಲ ಅನ್ನ, ನೀರು ಇಲ್ಲದೇ ಕಾದು ಮಹಿಳೆ ಅಸ್ವಸ್ಥಗೊಂಡಿದ್ದಾರೆ.ವಿಷಯ ತಿಳಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Latest News

error: Content is protected !!