Thursday, June 4, 2026
Homeಕರಾವಳಿಬಂದಾರು: ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ 1 ಲಕ್ಷ ಧನಸಹಾಯ ನೀಡಿದ ಶಾಸಕ ಹರೀಶ್ ಪೂಂಜರವರಿಗೆ...

ಬಂದಾರು: ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ 1 ಲಕ್ಷ ಧನಸಹಾಯ ನೀಡಿದ ಶಾಸಕ ಹರೀಶ್ ಪೂಂಜರವರಿಗೆ ಸನ್ಮಾನ

- Advertisement -
- Advertisement -

ಬೆಳ್ತಂಗಡಿ: ಬಂದಾರು ಗ್ರಾಮದ ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಧನಸಹಾಯ ನೀಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಗೆ ಕ್ಷೇತ್ರದ ಧರ್ಮದರ್ಶಿಗಳಾದ ಆನಂದಗೌಡ ಮುಂಡೂರು ಸನ್ಮಾನಿಸಿ ಅಭಿನಂದಿಸಿದರು,

ದೇವಸ್ಥಾನದ ನೂತನ ಸುತ್ತುಪೌಳಿಯ ಎದುರು ಗೋಪುರ ಸಮರ್ಪಣೆ ಹಾಗೂ ವರ್ಷಾವಧಿ ಮಹೋತ್ಸವದ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಧನಸಹಾಯ ನೀಡುವ ಭರವಸೆ ನೀಡಿದ್ದರು.ಕೊಟ್ಟ ಭರವಸೆಯಂತೆ ಶಾಸಕರು ತಮ್ಮ ವೈಯುಕ್ತಿಕ ನೆಲೆಯಲ್ಲಿ 1 ಲಕ್ಷ ರೂ ಧನಸಹಾಯ ನೀಡಿದ್ದಾರೆ. ಆ ಪ್ರಯುಕ್ತ‌ ಕ್ಷೇತ್ರದ ಧರ್ಮದರ್ಶಿಗಳಾದ ಆನಂದಗೌಡ ಮುಂಡೂರು ಇವರು ಶಾಸಕರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬಂದಾರು ಗ್ರಾ.ಪಂ.ಸದಸ್ಯರಾದ ಶ್ರೀ ದಿನೇಶ್ ಗೌಡ ಖಂಡಿಗ ,ಬೆಳ್ತಂಗಡಿ ತಾಲೂಕು ಯುವಮೋರ್ಚಾ ಸದಸ್ಯರಾದ ಗಿರೀಶ್ ಗೌಡ ಬಿ.ಕೆ, ಚಿರಾಮೃತ ಕುಂಬುಡಂಗೆ, ಅಶ್ವತ್ ಗೌಡ ಮುಂಡೂರು ಉಪಸ್ಥಿತರಿದ್ದರು.

- Advertisement -

Latest News

error: Content is protected !!