- Advertisement -
![]()
- Advertisement -
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಕಚೇರಿಗೆ ತಡವಾಗಿ ಹಾಜರಾಗುವಂತಿಲ್ಲ. ಕಚೇರಿಗೆ ನಿಗದಿತ ಅವಧಿಗೆ ಕಚೇರಿಗೆ ಹಾಜರಾಗಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಬೆಳಗ್ಗೆ ಹತ್ತು ಗಂಟೆಗೆ ನೌಕರರು ಮತ್ತು ಅಧಿಕಾರಿಗಳು ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಮತ್ತು ಕಚೇರಿ ಅವಧಿ ಪೂರ್ಣವಾಗುವರೆಗೆ ನಿಗದಿತ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕಿದೆ.
ಒಂದು ವೇಳೆ ಕಚೇರಿ ಅವಧಿಯಲ್ಲಿ ಅನ್ಯ ಕೆಲಸದ ಮೇಲೆ ತೆರಳಿದರೆ ಕಾರಣ ನಮೂದಿಸಿ ಮೇಲಧಿಕಾರಿಗಳ ಪೂರ್ವಾನುಮತಿ ಪಡೆದು ತೆರಳಬೇಕಾಗಿದೆ.
ವಿಳಂಬ ಹಾಜರಾತಿ, ಕಚೇರಿ ಅವಧಿಯಲ್ಲಿ ಸ್ವಸ್ಥಾನದಲ್ಲಿ ಇಲ್ಲದ ಮತ್ತು ಮೇಲಧಿಕಾರಿಗಳ ಅನುಮತಿ ಪಡೆದಿಲ್ಲದ ನೌಕರರ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಶಿಸ್ತು ಕ್ರಮ ಜರುಗಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಆದೇಶ ನೀಡಿದ್ದಾರೆ.
- Advertisement -


