Wednesday, June 24, 2026
Homeಕರಾವಳಿಪುತ್ತೂರಿನಲ್ಲಿ ಪಾನಮತ್ತನಾಗಿ ತೂರಾಡುತ್ತಿದ್ದ ಅರ್ಚಕರನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು

ಪುತ್ತೂರಿನಲ್ಲಿ ಪಾನಮತ್ತನಾಗಿ ತೂರಾಡುತ್ತಿದ್ದ ಅರ್ಚಕರನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು

- Advertisement -
- Advertisement -

ಪುತ್ತೂರು: ಪಾನಮತ್ತನಾಗಿ ತೂರಾಡುತ್ತಿದ್ದ ಅರ್ಚಕರೊಬ್ಬರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ ಘಟನೆ ಪುತ್ತೂರಿನ ದರ್ಬೆ ವೃತ್ತದಲ್ಲಿ ನಡೆದಿದೆ.

ಕಳೆದ 8 ತಿಂಗಳ ಹಿಂದೆಯಷ್ಟೆ ಪುತ್ತೂರು ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇರಿಕೊಂಡ ಶಿರಸಿ ಮೂಲದ ಅರ್ಚಕರೊಬ್ಬರು ಮದ್ಯ ಸೇವನೆ ಮಾಡುವುದನ್ನು ಗಮನಿಸಿ ತಿಂಗಳ ಹಿಂದೆ ಅವರನ್ನು ಕೆಲಸದಿಂದ ತೆರವು ಮಾಡಲಾಗಿತ್ತು. ಅವರು ಊರಿಗೆ ಹೋಗದೆ ಪುತ್ತೂರಿನಲ್ಲೇ ಇದ್ದರು.

ಜು.24 ರಂದು ರಾತ್ರಿ ದರ್ಬೆ ವೃತ್ತದಲ್ಲಿ ಅವರು ತೂರಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Latest News

error: Content is protected !!