Thursday, June 4, 2026
Homeಕರಾವಳಿಉಡುಪಿಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶ ಅಧಿಸೂಚನೆಗೆ ವಿರೋಧ: ನವದೆಹಲಿಯಲ್ಲಿ ಇಂದು ರಾಜ್ಯದ ನಿಯೋಗದಿಂದ ಕೇಂದ್ರ ಪರಿಸರ...

ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶ ಅಧಿಸೂಚನೆಗೆ ವಿರೋಧ: ನವದೆಹಲಿಯಲ್ಲಿ ಇಂದು ರಾಜ್ಯದ ನಿಯೋಗದಿಂದ ಕೇಂದ್ರ ಪರಿಸರ ಸಚಿವರ ಭೇಟಿ

- Advertisement -
- Advertisement -

ನವದೆಹಲಿ: ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶ ಕುರಿತಾದ ಕೇಂದ್ರ ಸರ್ಕಾರದ ಅಧಿಸೂಚನೆಗೆ ಕರ್ನಾಟಕ ತನ್ನ ವಿರೋಧ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸರ್ಕಾರದ ಮುಂದೆ ರಾಜ್ಯ ಸರ್ಕಾರದ ನಿಯೋಗ ಮನವಿ ಸಲ್ಲಿಸಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಿಯೋಗದಿಂದ ಇಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಚಿವ ಭೂಪೇಂದ್ರ ಯಾದವ್ ಭೇಟಿ ನಡೆಯಲಿದ್ದು,
ನವದೆಹಲಿಯಲ್ಲಿ ಭೇಟಿ ಮಾಡಿ ರಾಜ್ಯದ ನಿಯೋಗ ಮನವಿ ಸಲ್ಲಿಸಲಿದೆ.

ನಿಯೋಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್, ಸಾಗರ ಶಾಸಕ ಹರತಾಳು ಹಾಲಪ್ಪ, ವಿರಾಜಪೇಟೆ ಶಾಸಕ ಕೆ‌.ಜಿ. ಬೋಪಯ್ಯ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಭಾಗಿಯಾಗಲಿದ್ದಾರೆ.

- Advertisement -

Latest News

error: Content is protected !!