Wednesday, July 15, 2026
Homeಕರಾವಳಿಕಾಸರಗೋಡುಕೇರಳದಲ್ಲಿ ಮೀನುಗಾರರಿಗೆ ಸಿಕ್ತು  28 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ

ಕೇರಳದಲ್ಲಿ ಮೀನುಗಾರರಿಗೆ ಸಿಕ್ತು  28 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ

- Advertisement -
- Advertisement -

ಕೇರಳ; ದೂರ ಸಮುದ್ರದ ಮೀನುಗಾರಿಕೆಗೆ ತೆರಳಿದ ವೇಳೆ ಇಲ್ಲಿನ ಮೀನುಗಾರರಿಗೆ  ತಿಮಿಂಗಿಲದ ವಾಂತಿ ದೊರೆತಿದೆ.

ಈ‌ ವಾಂತಿ ಬರೊಬ್ಬರಿ 28 ಕೆಜಿ ತೂಕವಿದ್ದು, ತಿಮಿಂಗಿಲದ ವಾಂತಿಯ ಮೊತ್ತ ಬರೋಬ್ಬರಿ 28 ಕೋಟಿ ರೂ. ಎನ್ನಲಾಗುತ್ತಿದೆ. ಇದನ್ನು  ತೀರಕ್ಕೆ ಎಳೆದು ತಂದಿದ್ದು, ಕರಾವಳಿಯ ಪೊಲೀಸರಿಗೆ ನೀಡಿದ್ದಾರೆ.

ಅಂಬರ್ ಗ್ರೀಸ್ ಎಂದು ಕರೆಯಲ್ಪಡುವ ಈ ತಿಮಿಂಗಿಲ ವಾಂತಿಯನ್ನು ಮೀನುಗಾರರು ನಮಗೆ ಕೊಟ್ಟಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅವರು ಬಂದು ನಮ್ಮಿಂದ ಅದನ್ನು ಸ್ವೀಕರಿಸಿದ್ದಾರೆ ಎಂದು ಕರಾವಳಿ ಪೊಲೀಸರು ಹೇಳಿದ್ದಾರೆ.

ರಾಜೀವ್ ಗಾಂಧಿ ಬಯೋಟೆಕ್ನಾಲಜಿ ಕೇಂದ್ರಕ್ಕೆ ವಾಂತಿ ರವಾನಿಸಿ ಪರೀಕ್ಷೆ ನಡೆಯುತ್ತಿದೆ.ತಿಮಿಂಗಿಲದ ಈ ವಾಂತಿಯನ್ನು ಸುಗಂಧದ್ರವ್ಯ ಮಾಡಲು ಬಳಸಲಾಗುತ್ತದೆ. ಅಲ್ಲದೇ ಒಂದು ಕೆಜಿ ಅಂಬರ್ಗ್ರಿಸ್‌ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೋಟಿ ಬೆಲೆ ಇದೆ. ಆದರೆ ಇದರ ಮಾರಾಟಕ್ಕೆ ಭಾರತದ ಕಾನೂನಿನಲ್ಲಿ ನಿಷೇಧವಿದೆ.

- Advertisement -

Latest News

error: Content is protected !!