Thursday, June 4, 2026
Homeಕರಾವಳಿಮಡಿಕೇರಿಯಲ್ಲಿ ಸರ್ಕಾರಿ‌ ಬಸ್ ಹಾಗೂ ಕಾರು‌ ನಡುವೆ ಅಪಘಾತ: ಸುಳ್ಯದ ಯುವಕರಿಗೆ ಗಾಯ

ಮಡಿಕೇರಿಯಲ್ಲಿ ಸರ್ಕಾರಿ‌ ಬಸ್ ಹಾಗೂ ಕಾರು‌ ನಡುವೆ ಅಪಘಾತ: ಸುಳ್ಯದ ಯುವಕರಿಗೆ ಗಾಯ

- Advertisement -
- Advertisement -

ಕೊಡಗು; ಸರ್ಕಾರಿ‌ ಬಸ್ ಹಾಗೂ ಕಾರು‌ ನಡುವೆ ಅಪಘಾತ ಸಂಭವಿಸಿ ಸುಳ್ಯದ ಯುವಕರು ಗಾಯಗೊಂಡ ಘಟನೆ ಕೊಡಗಿನ ಮದೆನಾಡು ಎಂಬಲ್ಲಿ ನಡೆದಿದೆ‌.

ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಆಲ್ಟೊ ಕಾರು ಮತ್ತು ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಮದೆನಾಡು ಎಂಬಲ್ಲಿ ಪರಸ್ಪರ ಡಿಕ್ಕಿಯಾಗಿ ಕಾರಿನಲ್ಲಿದ್ದ ಸುಳ್ಯದ ಮೂವರು ಯುವಕರು ಗಾಯಗೊಂಡಿದ್ದಾರೆ.

ಸುಳ್ಯದ ಜಯನಗರದ ಸಿನಾನ್ ,ಅತ್ತಾವುಲ್ಲಾ,ಸಿರಾಜ್ ಅವರಿ‌ಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗೆ ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರ್ಕಾರಿ ಬಸ್‌ನವರಿಗೆ 6000 ನೀಡಿ ಅಪಘಾತ ಕೇಸನ್ನು ‌ರಾಜಿಯಲ್ಲಿ‌ ಇತ್ಯರ್ಥಪಡಿಸಿದ್ದೇವೆ ಎಂದು ಅಪಘಾತದಲ್ಲಿ ‌ಗಾಯಗೊಂಡ‌ ಯುವಕರು ತಿಳಿಸಿದ್ದಾರೆ.

- Advertisement -

Latest News

error: Content is protected !!