Sunday, June 7, 2026
Homeಕರಾವಳಿಕಾಸರಗೋಡುಹೆತ್ತ ಮಗುವನ್ನೇ ಉಸಿರುಗಟ್ಟಿಸಿ ಕೊಂದ ತಾಯಿ

ಹೆತ್ತ ಮಗುವನ್ನೇ ಉಸಿರುಗಟ್ಟಿಸಿ ಕೊಂದ ತಾಯಿ

- Advertisement -
- Advertisement -

ಕೇರಳ: ಹೆತ್ತ ಮಗುವನ್ನೇ ಉಸಿರುಗಟ್ಟಿಸಿ ತಾಯಿ ಕೊಂದ ಘಟನೆ‌ ಕೇರಳದ ಅಥೋಲಿಯಲ್ಲಿ ನಡೆದಿದೆ. ಏಳು ವರ್ಷದ ಬಾಲಕನನ್ನು ತಾಯಿ ಕೊಲೆ‌ ಮಾಡಿರುವುದು ಬಹಿರಂಗವಾಗಿದೆ.

ಡ್ಯಾನಿಶ್ ಹುಸೇನ್ ಅವರ ಪುತ್ರ ಹಮ್ದಾನ್ ಡ್ಯಾನಿಶ್ ಹುಸೇನ್ (7) ಮೃತಪಟ್ಟ ಬಾಲಕ. ತಾಯಿ ಮಹಲ್ ಜುಲೈಮಾ ಮಗನನ್ನು ‌ಕೊಲೆ ಮಾಡಿದ್ದಾಳೆ. ಈಕೆ ಮಾನಸಿಕ ಅಸ್ವಸ್ಥೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು ಎನ್ನಲಾಗಿದೆ.

ಬಾಲಕ ಹೃದಯಾಘಾತದಿಂದ ನಿಧನವಾಗಿದ್ದಾನೆಂದು  ಆರಂಭದಲ್ಲಿ ಹೇಳಲಾಗಿತ್ತು.ಈ ಕುರಿತು ಅನುಮಾನದ ಮೇಲೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರವೇ ಇದು ಕೊಲೆ ಎಂದು ಸ್ಪಷ್ಟವಾಗಿದೆ. ತನಿಖೆ ವೇಳೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಹಿರಂಗವಾಗಿದೆ.

ಬಾಲಕ ಇಲಾಹಿಯಾ ಇಂಗ್ಲಿಷ್ ಶಾಲೆಯ 2ನೇ ತರಗತಿ ವಿದ್ಯಾರ್ಥಿಯಾಗಿದ್ದ. ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಗಂಭೀರ ಸ್ಥಿತಿಯಲ್ಲಿ  ಮನೆಯಲ್ಲಿ ಪತ್ತೆಯಾಗಿದ್ದಾನೆ. ಅವನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ.

- Advertisement -

Latest News

error: Content is protected !!