- Advertisement -
- Advertisement -
ಉಡುಪಿ: ಮೀನುಗಾರಿಕೆ ತೆರಳಿದ ವೇಳೆ ದೋಣಿ ಮಗುಚಿ ಯುವಕ ಸಾವನ್ನಪ್ಪಿರುವ ಘಟನೆ ಉಡುಪಿಯ ಪಾರಂಪಳ್ಳಿ ಪಡುಕರೆಯ ಕಡಲ ಕಿನಾರೆಯಲ್ಲಿ ನಡೆದಿದೆ.
ಪಾರಂಪಳ್ಳಿ ನಿವಾಸಿ ಸುಮಂತ್ ಮೊಗವೀರ (23) ಮೃತ ದುರ್ದೈವಿ.
ನಿನ್ನೆ ಬೆಳಿಗ್ಗೆ ಸಂದೀಪ್, ಪ್ರಜ್ವಲ್ ಹಾಗೂ ಸುಮಂತ್ ಮೀನುಗಾರಿಕೆ ತೆರಳಲು ನಾಡ ದೋಣಿಯ ಮೂಲಕ ಸಮುದ್ರಕ್ಕೆ ತೆರಳಿದ್ದರು. ಸಮುದ್ರದಲ್ಲಿ ಈ ವೇಳೆ ಭಾರೀ ಗಾತ್ರದ ಅಲೆಗೆ ಸಿಲುಕಿ ದೋಣಿಯಲ್ಲಿದ್ದ ಮೂವರು ಮುಗುಚಿ ಬಿದ್ದಿದ್ದು, ಇಬ್ಬರು ಸಂದೀಪ್ ಮತ್ತು ಪ್ರಜ್ವಲ್ ಈಜಿ ದಡ ಸೇರಿದ್ದಾರೆ.
ಆದರೆ ಸುಮಂತ್ ಭಾರೀ ಗಾತ್ರದ ಅಲೆಗಳಿಗೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ.
- Advertisement -