Saturday, June 13, 2026
Homeಕರಾವಳಿವಿಟ್ಲ: ಹಾಳೆ ತಟ್ಟೆ ತಯಾರಿಕಾ ಘಟಕದಲ್ಲಿ ಬೆಂಕಿ ಅನಾಹುತ

ವಿಟ್ಲ: ಹಾಳೆ ತಟ್ಟೆ ತಯಾರಿಕಾ ಘಟಕದಲ್ಲಿ ಬೆಂಕಿ ಅನಾಹುತ

- Advertisement -
- Advertisement -

ವಿಟ್ಲ: ಹಾಳೆ ತಟ್ಟೆ ತಯಾರಿಕಾ ಘಟಕದಲ್ಲಿ ಬೆಂಕಿ ಅನಾಹುತ ಸಂಭವಿಸಿರುವ ಘಟನೆ  ವಿಟ್ಲ ಪಡ್ನೂರು ಗ್ರಾಮದ ಬಲಿಪಗುಳಿಯಲ್ಲಿ ನಡೆದಿದೆ.

ಬಲಿಪಗುಳಿಯಲ್ಲಿರುವ ಇಕೋ ವಿಶನ್‌ ಎಂಬ ಹಾಳೆ ತಟ್ಟೆ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇಕೋ ವಿಶನ್‌ ಫ್ಯಾಕ್ಟರಿಯಿಂದ ಏಕಾ ಏಕಿ ದಟ್ಟವಾದ ಹೊಗೆ ಹೊರ ಬರಲು ಆರಂಭವಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ಖಾನೆಯ ಆವರಣ ಪೂರ್ತಿ ಹೊಗೆ ಆವರಿಸುತ್ತಿದ್ದಂತೆ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದರು.ಇದೇ ವೇಳೆ ವಿಟ್ಲ ಪೊಲೀಸರು ಕೂಡಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಕ್ಕೆ ಮಾರ್ಗದರ್ಶನ ನೀಡಿದರು. ಈ ದುರ್ಘಟನೆಗೆ ಕಾರಣ ತಿಳಿದು ಬಂದಿಲ್ಲ.ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

.

- Advertisement -

Latest News

error: Content is protected !!