Wednesday, June 3, 2026
Homeತಾಜಾ ಸುದ್ದಿಮಂಗಳೂರು: ಗಾಂಜಾ ಮಾರಾಟ: ಕುಖ್ಯಾತ ಆರೋಪಿ ವಿಕ್ಕಿ ಬಪ್ಪಾಲ್‌ ಮತ್ತು ಆತನ ಪತ್ನಿ ಅರೆಸ್ಟ್‌

ಮಂಗಳೂರು: ಗಾಂಜಾ ಮಾರಾಟ: ಕುಖ್ಯಾತ ಆರೋಪಿ ವಿಕ್ಕಿ ಬಪ್ಪಾಲ್‌ ಮತ್ತು ಆತನ ಪತ್ನಿ ಅರೆಸ್ಟ್‌

- Advertisement -
- Advertisement -

ಮಂಗಳೂರು: ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಗಾಂಜಾ ಹೊಂದಿದ್ದ ಕುಖ್ಯಾತ ಆರೋಪಿ ಹಾಗೂ ಆತನ ಪತ್ನಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಿಖ್ಯಾತ್ ಅಲಿಯಾಸ್ ವಿಕ್ಕಿ ಬಪ್ಪಾಲ್(28) ಹಾಗೂ ಆತನ ಪತ್ನಿ ಅಂಜನಾ(21) ಬಂಧಿತರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮಂಗಳೂರಿನ ನಗರದ ಕಾವೂರಿನ ಶಂಕರ ನಗರ ಕೆ.ಸಿ.ಆಳ್ವ ಲೇಔಟ್ ನ ಮನೆಯೊಂದಕ್ಕೆ ದಾಳಿ ಮಾಡಿ ಗಾಂಜಾ ಸಹಿತ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳಿಂದ 2.200 ಕೆಜಿ ತೂಕದ 22,000 ರೂ. ಮೌಲ್ಯದ ಗಾಂಜಾ, 1,500 ನಗದು, 1 ಮೊಬೈಲ್ ಫೋನ್ ಮತ್ತು ಡಿಜಿಟಲ್ ತೂಕ ಮಾಪನ ಸೇರಿದಂತೆ ಒಟ್ಟು 92,000 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!