Sunday, May 5, 2024
Homeತಾಜಾ ಸುದ್ದಿಕೊಯ್ಯೂರು: ರಸ್ತೆಯಲ್ಲೇ ಹರಿಯುತ್ತಿರುವ ಮಳೆ ನೀರು: ವಾಹನ ಸವಾರರಿಗೆ ಸಂಚರಿಸೋದೆ ಸವಾಲು: ಶೀಘ್ರ ಸಮಸ್ಯೆ ಬಗೆಹರಿಸುವಂತೆ...

ಕೊಯ್ಯೂರು: ರಸ್ತೆಯಲ್ಲೇ ಹರಿಯುತ್ತಿರುವ ಮಳೆ ನೀರು: ವಾಹನ ಸವಾರರಿಗೆ ಸಂಚರಿಸೋದೆ ಸವಾಲು: ಶೀಘ್ರ ಸಮಸ್ಯೆ ಬಗೆಹರಿಸುವಂತೆ ಜನರ ಅಹವಾಲು

spot_img
- Advertisement -
- Advertisement -

ಕೊಯ್ಯೂರು: ಕೊಯ್ಯೂರು ಗ್ರಾಮದ ವಾರ್ಡ್ 2ರ ಮಾವಿನಕಟ್ಟೆ -ಪೂರ್ಯಾಳ ರಸ್ತೆಯ ಗಾದಲ್ಕೆ ಎಂಬಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿಯೇ ಮಳೆ ನೀರು ಹರಿದು ವಾಹನ ಸಂಚಾರಕ್ಕೆ ಕಷ್ಟವಾಗಿದೆ.

ಮೋರಿ ದುರಸ್ತಿಯಾಗದೇ ಇರೋದು ಮತ್ತು ರಸ್ತೆಯ ಬದಿಯ ಚರಂಡಿಯಲ್ಲಿ ಮಣ್ಣು ತುಂಬಿರೋದ್ರಿಂದ ಈ ಸಮಸ್ಯೆ ಉಂಟಾಗಿದೆ. ವಿಪರ್ಯಾಸ ಅಂದ್ರೆ ಇಲ್ಲೇ ಕೊಯ್ಯೂರು ಗ್ರಾಮ ಪಂಚಾಯತ್ ನ ಈ ಭಾಗದ ಸದಸ್ಯರೊಬ್ಬರ ಮನೆಗೆ ಹೋಗುವ ದಾರಿಯಿದೆ. ಅವ್ರು ಇದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ಸುಮ್ಮನಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಕಳೆದ ಮಳೆಗಾಲದಲ್ಲಿಯು ಇದೇ ಸಮಸ್ಯೆ ಇತ್ತು. ಆ ಸಮಯದಲ್ಲಿ ಸಾರ್ವಜನಿಕರೇ ಇದಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ರು.ಆದ್ರೆ ಈ ವರ್ಷವೂ ಮತ್ತದೇ ಸಮಸ್ಯೆ ಕಾಡ್ತಾ ಇದ್ದು ಪಂಚಾಯತ್ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಸಂಚಾರದ ಸಮಸ್ಯೆ ಹೆಚ್ಚಾಗಿದ್ದು, ಹಿಂದೆ ಇದ್ದ ಚಿಕ್ಕ ಮೋರಿಯನ್ನು ಅಗೆದು ದೊಡ್ಡ ಮೋರಿಯನ್ನು ಅಳವಡಿಸಬೇಕು, ಚರಂಡಿಯನ್ನು ಸರಿಪಡಿಸಬೇಕು. ಅಲ್ಲದೇ ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಒಂದು ವಾರದೊಳಗೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!