- Advertisement -
- Advertisement -
ಕಡಬ: ವಿವಾಹ ನಿಶ್ಚಿಯವಾಗಿದ್ದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ದೋಲ್ಪಾಡಿಯಲ್ಲಿ ನಡೆದಿದೆ. ಯುವಕನನ್ನು ಲೋಕೇಶ್(21) ಮೃತ ದುರ್ದೈವಿ.
ಕೂಲಿ ಕೆಲಸ ಮಾಡಿಕೊಂಡಿದ್ದ ಈತನಿಗೆ ಕೆಲ ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತಗತು. ಕಾರಣಾಂತರಗಳಿಂದ ಮದುವೆ ಮುಂದೂಡಲಾಗಿತ್ತು. ಆದರೆ ಮೊನ್ನೆ ತಡರಾತ್ರಿ ಈತ ವಿಷ ಸೇವಿಸಿದ್ದು, ವಾಂತಿ ಮಾಡುತ್ತಿದ್ದ ಎನ್ನಲಾಗಿದೆ.
ವಿಷಯ ತಿಳಿದು ತಕ್ಷಣ ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದಾನೆ. ಮೃತ ಯುವಕ, ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾನೆ.
- Advertisement -