Saturday, June 6, 2026
Homeಇತರಕೊರೊನಾ ಬಳಿಕ ಸುನಾಮಿ ಸಂಭವಿಸಲಿದೆ: ಬ್ರಹ್ಮಾಂಡ ಗುರೂಜಿಗಳ ಭಯಾನಕ ಭವಿಷ್ಯ

ಕೊರೊನಾ ಬಳಿಕ ಸುನಾಮಿ ಸಂಭವಿಸಲಿದೆ: ಬ್ರಹ್ಮಾಂಡ ಗುರೂಜಿಗಳ ಭಯಾನಕ ಭವಿಷ್ಯ

- Advertisement -
- Advertisement -

ದೇಶಕ್ಕೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ಜನಜೀವನವನ್ನು ಅಕ್ಷರಶಃ ನರಕವನ್ನಾಗಿಸಿದೆ. ಕೊರೊನಾ ಕಾರಣಕ್ಕಾಗಿ ಆರ್ಥಿಕವಾಗಿಯೂ ಜನ ಸಂಕಷ್ಟಕ್ಕೀಡಾಗಿದ್ದು ಇದರ ಮಧ್ಯೆ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ ನುಡಿದಿರುವ ಭವಿಷ್ಯ ವಾಣಿಯೊಂದು ಚರ್ಚೆಗೆ ಕಾರಣವಾಗಿದೆ.

ಹೊಸದುರ್ಗ ತಾಲ್ಲೂಕಿನ ದಶರಥರಾಮೇಶ್ವರ ಕ್ಷೇತ್ರಕ್ಕೆ ಸೋಮವಾರದಂದು ಭೇಟಿ ನೀಡಿದ್ದ ಅವರು, ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕೊರೊನಾ ಬಳಿಕ ವಿಶ್ವದಲ್ಲಿ ಭೀಕರ ಸುನಾಮಿ ಸಂಭವಿಸಲಿದೆ ಎಂದು ಹೇಳಿದ್ದಾರೆ.

ಸುನಾಮಿ ಪರಿಣಾಮವಾಗಿ ಅಮೆರಿಕಾದಿಂದ ಆಸ್ಟ್ರೇಲಿಯಾದವರೆಗೆ ಅನೇಕ ಭೂಪ್ರದೇಶಗಳು ಸಮುದ್ರದ ಪಾಲಾಗಲಿವೆ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದು, ಅಧರ್ಮವನ್ನು ನಿರ್ನಾಮ ಮಾಡಲು ಈ ಹಿಂದೆ ಪ್ಲೇಗಮ್ಮ ಆಗಿ ಬಂದಿದ್ದ ಕೌಮಾರಿಯೇ ಈಗ ಕೊರೊನಾ ರೂಪದಲ್ಲಿ ಬಂದಿದ್ದಾಳೆ ಎಂದಿದ್ದಾರೆ.

- Advertisement -

Latest News

error: Content is protected !!