- Advertisement -
![]()
- Advertisement -
ಸುಳ್ಯ: ಆಸ್ತಿ ವಿವಾದ ಹಿನ್ನೆಲೆ ತಾಯಿ ಮತ್ತು ಮಗ ಸೇರಿಕೊಂಡು ಮೂವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಹಾಲೆಮಜಲು ಅಂಬೆಕಲ್ಲು ಸುರೇಶ ಎಂಬವರ ಪತ್ನಿ ಮಂಜುಳ, ಅವರ ಮನೆ ಕೆಲಸಕ್ಕೆಂದು ಬಂದಿದ್ದ ಸುಬ್ರಹ್ಮಣ್ಯ ಮತ್ತು ಮಾಧವ ಎಂಬವರ ಮೇಲೆ ಮೀನಾಕ್ಷಿ ಹಾಗೂ ಸೋಹನ್ ಎಂಬವರು ಹಲ್ಲೆ ಮಾಡಿದ್ದಾರೆ.
ಸುರೇಶ್ ಅವರ ಹೊಸವಮನೆಯ ಕೆಲಸ ನಡೆಯುತ್ತಿದ್ದು ಅಲ್ಲಿಗೆ ಸುರೇಶ್ ಅವರ ಅಕ್ಕ ಮೀನಾಕ್ಷಿ ಮತ್ತು ಅವರ ಮಗ ಸೋಹನ್ ಬಂದಿದ್ದು ಆಸ್ತಿ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮೀನಾಕ್ಷಿ ಮತ್ತು ಸೋಹನ್ ಸೇರಿಕೊಂಡು ಮಂಜುಳಾ, ಸುಬ್ರಹ್ಮಣ್ಯ ಮತ್ತು ಮಾಧವ ಅವರಿಗೆ ತಲವಾರಿನಿಂದ ಕಡಿದು, ರೀಪಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆನ್ನಲಾಗಿದೆ. ಗಾಯಗೊಂಡ ಮೂವರು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
- Advertisement -


