Sunday, June 7, 2026
Homeತಾಜಾ ಸುದ್ದಿವಿಟ್ಲ: ಬಾಕ್ಸೈಟ್‌ ಲಾರಿಗಳ ಅವಾಂತರ: ಜನಸಾಮಾನ್ಯರು ತತ್ತರ

ವಿಟ್ಲ: ಬಾಕ್ಸೈಟ್‌ ಲಾರಿಗಳ ಅವಾಂತರ: ಜನಸಾಮಾನ್ಯರು ತತ್ತರ

- Advertisement -
- Advertisement -

ವಿಟ್ಲ: ಕಳೆದು ಹಲವು ಸಮಯಗಳಿಂದ ನೆರೆ ರಾಜ್ಯ ಕೇರಳದಿಂದ ಆಂಧ್ರ ಪ್ರದೇಶಕ್ಕೆ ಬೃಹತ್ ಲಾರಿಗಳಲ್ಲಿ ಬಾಕ್ಸೆಟ್ ಸಾಗಿಸುತ್ತಿದ್ದು ಜನರನ್ನು ನಿದ್ದೆಗೆಡಿಸುವಂತಾಗಿದೆ. ಈ ಲಾರಿ ಚಾಲಕರ ಅತಿ ವೇಗ, ನಿರ್ಲಕ್ಷ್ಯದ ಚಾಲನೆಯಿಂದ ಜನರು ಹೈರಾಣ ಆಗಿದ್ದಾರೆ.

ಬಾಕ್ಸೆಟ್ ಸಾಗಾಟದ ಯಮದೂತ ಲಾರಿಗಳು ಕನ್ಯಾನ ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಯಾವ ಕ್ಷಣ ಯಾರ ಪ್ರಾಣ ಬಲಿ ಪಡೆಯುತ್ತೋ ಎಂಬ ಆತಂಕ ವ್ಯಕ್ತವಾಗಿದೆ. ದಿನದ 24ಗಂಟೆಯೂ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ಭಾರೀ ಸರಕು ಸಾಗಾಟದ ಬಾಕ್ಸೆಟ್ ತುಂಬಿದ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ.

ವಿಟ್ಲ ಹೊರವಲಯದ ಮಂಗಲಪದವು ಎಂಬಲ್ಲಿ ಪ್ರತಿನಿತ್ಯ ಬಾಕ್ಸೆಟ್ ಲಾರಿಗಳು ಹೂತು ನರಳಾಡುತ್ತಿವೆ. ಲಾರಿಯನ್ನು ಮೇಲೆತ್ತುವುದಕ್ಕಾಗಿ ಜೆಸಿಬಿ ಯಂತ್ರಗಳು ಬಂದು ಲಾರಿಯಲ್ಲಿರುವ 50-60ಟನ್ ಬಾಕ್ಸೆಟ್ ಮಣ್ಣನ್ನು ರಸ್ತೆಯಲ್ಲೇ ಖಾಲಿ ಮಾಡುತ್ತಿವೆ. ಇದರಿಂದಾಗಿ ಮಂಗಲಪದವು ರಸ್ತೆ ಅವ್ಯವಸ್ಥೆಯ ಆಗರವಾಗಿದ್ದು ಇತರ ವಾಹನಗಳು ಸಂಚರಿಸುವುದು ಅಸಾಧ್ಯವಾಗಿದೆ. ಗಣಿ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಜಾಣ ಕುರುಡು ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ.

ಮಳೆ ಬಂದು ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಸಡಿಲಗೊಂಡು ವಾಹನಗಳು ಅಲ್ಲೇ ನಿಲ್ಲುವಂತಾಗಿದೆ. ಇನ್ನೂ ಬೃಹತ್ ಗಾತ್ರ ಸರಕು ಸಾಗಾಟ ವಾಹನ ಅಂದರೆ ಕೇಳಬೇಕೆ.? ಮಂಗಿಲಪದವು ಎಂಬಲ್ಲಿ ಲಾರಿ ಅಲ್ಲೇ ಹೂತು ಬಾಕಿಯಾಗಿದ್ದು ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ. ಓರ್ವ ಮಾಡುವ ಕೆಲಸದಿಂದ ನೂರಾರು ಮಂದಿ ಸಂಕಷ್ಟ ಅನುಭವಿಸುವಂತಾಗಿದೆ.

- Advertisement -

Latest News

error: Content is protected !!