Friday, July 4, 2025
Homeತಾಜಾ ಸುದ್ದಿಅರ್ಧ ಶತಕ ಸಿಡಿಸಿದ ನಾಯಕ ರೋಹಿತ್ ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸುಲಭದ ಗೆಲುವು

ಅರ್ಧ ಶತಕ ಸಿಡಿಸಿದ ನಾಯಕ ರೋಹಿತ್ ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸುಲಭದ ಗೆಲುವು

spot_img
- Advertisement -
- Advertisement -

ಲಂಡನ್: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ ಖುಷಿಯಲ್ಲಿದೆ. ಬುಮ್ರಾ ಮಾರಕ ಬೌಲಿಂಗ್ ದಾಳಿ ಹಾಗೂ ನಾಯಕ ರೋಹಿತ್ ಶರ್ಮಾ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅತ್ಯಂತ ಸುಲಭವಾಗಿ ಜಯ ಸಾಧಿಸಿದೆ. ಬುಮ್ರಾ ಮಾರಕ ಬೌಲಿಂಗ್‌ ದಾಳಿಯಿಂದಾಗಿ ಆಂಗ್ಲರನ್ನು 110 ರನ್‌ಗಳಿಗೆ ಕಟ್ಟಿಹಾಕಲಾಗಿತ್ತು. ಸುಲಭದ ಗುರಿ ಬೆನ್ನತ್ತಿದ ಭಾರತ ತಂಡ ವಿಕೆಟ್ ನಷ್ಟವಿಲ್ಲದೆ ಜಯ ಸಾಧಿಸಿತು.

111 ರನ್‌ಗಳ ಗುರಿಯನ್ನು ಕೇವಲ 18.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಬೆನ್ನಟ್ಟಿದ್ದು ಗಮನಾರ್ಹ. ಟೀಂ ಇಂಡಿಯಾದ ಆಲ್ ರೌಂಡ್ ಪ್ರದರ್ಶನದ ಮುಂದೆ ವಿಶ್ವದ ಅತ್ಯುತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಇಂಗ್ಲೆಂಡ್ ಸೋಲು ಒಪ್ಪಿಕೊಂಡಿತು. ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 25.2 ಓವರ್ ಗಳಲ್ಲಿ 110 ರನ್ ಗೆ ಸರ್ವಪತನ ಕಂಡಿತು. ಜೋಸ್ ಬಟ್ಲರ್ ಹೊರತು (30) ಪಡಿಸಿ ಆರಂಭಿಕ ಯಾವೊಬ್ಬ ಆಟಗಾರರೂ ಎರಡಂಕಿ ದಾಟಲಿಲ್ಲ. ನಾಲ್ವರು ಬ್ಯಾಟರ್ ಗಳ ಶೂನ್ಯಕ್ಕೆ ಔಟಾದರು. ಇನ್ನೊಂದು ವಿಶೇಷ ಎಂದರೆ ಈ ನಾಲ್ವರನ್ನು ಬುಮ್ರಾ ಔಟ್ ಮಾಡಿದರು. 111 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಅರ್ಧ ಶತಕ( 76) ಹಾಗೂ ಶಿಖರ್ ಧವನ್ 31 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರಲ್ಲದೆ ಅಜೇಯರಾಗಿ ಉಳಿದರು. ಇಡೀ ಪಂದ್ಯ ಕೇವಲ 44 ಓವರ್‌ಗಳಲ್ಲಿ ಅಂತ್ಯಗೊಂಡಿರುವುದು ಗಮನಾರ್ಹ.

ಇನ್ನು ಇಂಗ್ಲೆಂಡ್ 25.2 ಓವರ್ ಮಾತ್ರ ಆಡಿತು. ಈ 10 ವಿಕೆಟ್ ಜಯದೊಂದಿಗೆ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ ಮತ್ತು ಶಿಖನ್ ಧವನ್ ಏಕದಿನದಲ್ಲಿ 100ಕ್ಕೂ ಹೆಚ್ಚು ಜೊತೆಯಾಟವನ್ನು ಸ್ಥಾಪಿಸಿದ್ದು ಇದು 18ನೇ ಬಾರಿ. ಇದಲ್ಲದೆ, ಸಚಿನ್ ಮತ್ತು ಗಂಗೂಲಿ ನಂತರ, ಏಕದಿನದಲ್ಲಿ 5 ಸಾವಿರಕ್ಕೂ ಹೆಚ್ಚು ರನ್‌ಗಳ ಆರಂಭಿಕ ಜೊತೆಯಾಟ ದಾಖಲೆ ಬರೆದರು.

ರೋಹಿತ್ ಶರ್ಮಾ ಕೇವಲ 58 ಎಸೆತಗಳಲ್ಲಿ 76 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳಿದ್ದವು. ರೋಹಿತ್ ಗೆ ಸಾಥ್ ನೀಡಿದ ಧವನ್ 54 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 31 ರನ್ ಗಳಿಸಿದರು.

ಇನ್ನು ಬುಮ್ರಾ ಅಬ್ಬರಕ್ಕೆ ಇಂಗ್ಲೆಂಡ್ ತತ್ತರಿಸಿದ್ದು, ಇದಕ್ಕೂ ಮುನ್ನ ಭಾರತ ತಂಡದ ವೇಗಕ್ಕೆ ಇಂಗ್ಲೆಂಡ್ ತತ್ತರಿಸುವಂತೆ ಮಾಡಿದರು. ಕೆಲವು ದಿನಗಳ ಹಿಂದಷ್ಟೇ ಏಕದಿನ ಕ್ರಿಕೆಟ್ ನಗಲ್ಲಿ ಒಂದೇ ಪಂದ್ಯದಲ್ಲಿ 498 ರನ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದ ಈ ಪಂದ್ಯದಲ್ಲಿ ತಿಣುಕಾಡಿತು. ಭಾರತದ ಬೌಲರ್ ಗಳಾದ ಬುಮ್ರಾ ಮತ್ತು ಶಮಿ ಮಾರಕ ದಾಳಿಯ ಎದುರು ನಿರುತ್ತರವಾಯಿತು. ಅದರಲ್ಲೂ ಬುಮ್ರಾ ಹೊಡೆತಕ್ಕೆ ನಾಲ್ವರು ಸ್ಟಾರ್ ಬ್ಯಾಟ್ಸ್ ಮನ್ ಗಳು ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಬುಮ್ರಾ ಆರು ವಿಕೆಟ್ ಗಳನ್ನು ಕಬಳಿಸಿದರು. ಅಂತಿಮವಾಗಿ ಇಂಗ್ಲೆಂಡ್ 25.2 ಓವರ್‌ಗಳಲ್ಲಿ 110 ರನ್‌ಗಳಿಗೆ ಆಲೌಟ್ ಆಯಿತು. ಇದು ಭಾರತದ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ಕನಿಷ್ಠ ಸ್ಕೋರ್ ಆಗಿದೆ.

ಪ್ರಸಿದ್ ಕೃಷ್ಣ, ಶಮಿ 3, ಒಂದು ವಿಕೆಟ್ ಪಡೆದರು. ಬುಮ್ರಾ ಅಂತಿಮವಾಗಿ 7.2 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 6 ವಿಕೆಟ್ ಪಡೆದರು. ಇದು ಏಕದಿನದಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಇದಲ್ಲದೆ, ಇಂಗ್ಲೆಂಡ್ ನೆಲದಲ್ಲಿ ಏಕದಿನ ಪಂದ್ಯದಲ್ಲಿ ಆರು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾದರು. ಏಕದಿನ ಪಂದ್ಯಗಳಲ್ಲಿ 150 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದರು. ಇದು ಅವರ 80ನೇ ಏಕದಿನ ಪಂದ್ಯವಾಗಿದೆ. ಅತಿ ವೇಗವಾಗಿ 150 ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡರು ಎಂದು ತಿಳಿದು ಬಂದಿದೆ.

ಇಂಗ್ಲೆಂಡ್ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಎರಡನೇ ಓವರ್ ನಿಂದಲೇ ವಿಕೆಟ್ ಕಳೆದುಕೊಂಡಿತು. ಬುಮ್ರಾ ಅವರ ಸ್ಫೋಟಕ ಬೌಲಿಂಗ್‌ನಿಂದ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ಎರಡನೇ ಓವರ್ ನಲ್ಲಿ 6 ರನ್ ಗೆ ಆರಂಭಿಕ ಜೇಸನ್ ರಾಯ್ (0) ವಿಕೆಟ್ ಕಳೆದುಕೊಂಡ ತಂಡ ಚೇತರಿಸಿಕೊಳ್ಳಲಿಲ್ಲ. ಜೋ ರೂಟ್ (0), ಬೆನ್ ಸ್ಟೋಕ್ಸ್ (0), ಲಿಯಾಮ್ ಲಿವಿಂಗ್‌ಸ್ಟೋನ್ (0), ಜಾನಿ ಬೈರ್‌ಸ್ಟೋವ್ (7) ಬಂದು ಹೋದರು. ಇದರಿಂದಾಗಿ ಇಂಗ್ಲೆಂಡ್ ಕೇವಲ 26 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆಯಲ್ಲಿ ನಾಯಕ ಜೋಸ್ ಬಟ್ಲರ್ (30) ಮೊಯಿನ್ ಅಲಿ (14) ಜತೆಗೂಡಿ ಕೆಲಕಾಲ ವಿಕೆಟ್ ಪತನ ತಡೆದರು. ಇವರಿಬ್ಬರು ಆರನೇ ವಿಕೆಟ್‌ಗೆ 27 ರನ್ ಸೇರಿಸಿದರು. ಒಂದು ಹಂತದಲ್ಲಿ ಅವರು 63 ರನ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡು ಏಕದಿನ ಪಂದ್ಯದಲ್ಲಿ ಅತಿ ಕಡಿಮೆ ಸ್ಕೋರ್ ಎಂಬ ಕೆಟ್ಟ ದಾಖಲೆ ಮಾಡುವ ಹಾದಿಯಲ್ಲಿತ್ತು. ಆದರೆ ಕೊನೆಯಲ್ಲಿ, ಡೇವಿಡ್ ವಿಲ್ಲಿ ಮತ್ತು ಕಾರ್ಸ್ ಇದರಿಂದ ಪಾರು ಮಾಡಿದರು. ಇವರಿಬ್ಬರು 9ನೇ ವಿಕೆಟ್‌ಗೆ 35 ರನ್ ಸೇರಿಸಿದರು.

- Advertisement -
spot_img

Latest News

error: Content is protected !!