Thursday, June 4, 2026
Homeಕರಾವಳಿಸುಳ್ಯ: ಜುಲೈ 18ರಂದು ಗೃಹಪವೇಶವಾಗ ಬೇಕಾಗಿದ್ದ ಮನೆ ಮೇಲೆ ಬಿದ್ದ ಗುಡ್ಡ: ಮನೆ ಸಂಪೂರ್ಣ...

ಸುಳ್ಯ: ಜುಲೈ 18ರಂದು ಗೃಹಪವೇಶವಾಗ ಬೇಕಾಗಿದ್ದ ಮನೆ ಮೇಲೆ ಬಿದ್ದ ಗುಡ್ಡ: ಮನೆ ಸಂಪೂರ್ಣ ನೆಲಸಮ

- Advertisement -
- Advertisement -

ಸುಳ್ಯ: ಜುಲೈ 18ರಂದು ಗೃಹಪವೇಶವಾಗ ಬೇಕಾಗಿದ್ದ ಮನೆ ಮೇಲೆ ಬಿದ್ದ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲ ಸಮವಾಗಿರುವ ಘಟನೆ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಎಂಬಲ್ಲಿ ನಡೆದಿದೆ.

3 ದಿನದ ಹಿಂದೆ ಇದೇ ಮನೆ ಮೇಲೆ  ಮರ ಬಿದ್ದು ಮನೆ ಗೋಡೆಗಳು ಬಿರುಕು ಬಿಟ್ಟಿತ್ತು. ಬಿರುಕು ಬಿಟ್ಟಿರುವ ಗೋಡೆ ರಿಪೇರಿ ಕೆಲಸ ಮಾಡಲಾಗಿತ್ತು. ಜು.18ರಂದು ಗೃಹಪ್ರವೇಶ ನೆರವೇರಿಸಲು ಎಲ್ಲಾ ತಯಾರಿ ನಡೆದಿತ್ತು. ಆದರೆ ಅಷ್ಟರಲ್ಲೇ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮವಾಗಿದೆ.

ತೇಜ್ ಕುಮಾರ್ ಮತ್ತು ತಾರಾಮತಿ ದಂಪತಿಯ ಮನೆ ಕುಸಿದು ಹೋಗಿದೆ. ಪ್ರಜ್ವಲ್ ಮತ್ತು ಉಜ್ವಲ್ ಎಂಬ ಸಹೋದರರು ಮನೆಯಲ್ಲಿದ್ದರು. ಹಾಲ್​ನಲ್ಲಿ‌ ಮಲಗಿ 6.30 ಕ್ಕೆ ಮನೆಯಿಂದ ಹೊರಬಂದಿದ್ದರು. ಈ ವೇಳೆ ಗುಡ್ಡ ಕುಸಿದು 3 ಬೆಡ್ ರೂಂ ತುಂಬ ಮಣ್ಣು ಆವರಿಸಿಕೊಂಡಿದೆ. ಇನ್ನು ಗುಡ್ಡ ಕುಸಿದ ಹಿನ್ನೆಲೆ ಮನೆ ಬಳಿಯಿದ್ದ 3 ಬೈಕ್​ಗಳು ಮಣ್ಣಲ್ಲಿ ಸಿಲುಕಿ ಹಾನಿಯಾಗಿವೆ.

- Advertisement -

Latest News

error: Content is protected !!