Thursday, June 25, 2026
Homeತಾಜಾ ಸುದ್ದಿನಾನು ಹೇಳಿದ ಬೊಲೆರೋ ವಾಹನವನ್ನು ಹಿಡಿಯಬಾರದೆಂದು‌ ಶಾಸಕರು ಬರೆದ ಪತ್ರ ವೈರಲ್

ನಾನು ಹೇಳಿದ ಬೊಲೆರೋ ವಾಹನವನ್ನು ಹಿಡಿಯಬಾರದೆಂದು‌ ಶಾಸಕರು ಬರೆದ ಪತ್ರ ವೈರಲ್

- Advertisement -
- Advertisement -

ಗದಗ; ಶಾಸಕರೊಬ್ಬರು  ನಾನು ಹೇಳಿದ ಬೊಲೆರೋ ವಾಹನವನ್ನು ಹಿಡಿಯಬಾರದೆಂದು‌  ತಮ್ಮ  ಕ್ಷೇತ್ರದ ವಾಹನ ಸವಾರರೊಬ್ಬರಿಗೆ ಬರೆದು ಕೊಟ್ಟಿರುವ ಶಿಫಾರಸ್ಸು ಪತ್ರ ವೈರಲ್ ಆಗಿದೆ.

ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಪ್ಪ ಎಸ್ ಲಮಾಣಿಯವರ ಸಹಿ ಇರುವ ಶಿಫಾರಸ್ಸು ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಆಗಿದೆ. ಪತ್ರದಲ್ಲಿ, ಇದು ತಮ್ಮ ಕ್ಷೇತ್ರದ ವಾಹನ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳಗಟ್ಟಿಯ ಜಿ ಬಸವರಾಜ ಎನ್ನುವವರು ನನ್ನ ಮತಕ್ಷೇತ್ರ ಶಿರಹಟ್ಟಿಯ ವಿಧಾನಸಭಾ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ನಮ್ಮ ಪಕ್ಷದ ಕಾರ್ಯಕರ್ತರೂ ಆಗಿರುತ್ತಾರೆ. ನನಗೆ ಚಿರಪರಿಚಿತರಾಗಿದ್ದು, ಅವರ ಬೊಲೆರೋ ವಾಹನ AP-39, V-3517 ಅನ್ನು ಹಿಡಿಯಬಾರದು ಮತ್ತು ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ಉಲ್ಲೇಖಿಸಿದ್ದಾರೆ.

ವೈರಲ್ ಪತ್ರದ ಬೆನ್ನಲ್ಲೇ‌ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಪತ್ರ ನಕಲಿಯೇ ಎಂಬ ಸಂಶಯವೂ ಮೂಡಿದೆ.

- Advertisement -

Latest News

error: Content is protected !!