Monday, June 8, 2026
Homeಕರಾವಳಿಬಂಟ್ವಾಳದ ಪಂಜಿಕಲ್ಲಿ‌ನಲ್ಲಿ ಗುಡ್ಡ ಕುಸಿತದಿಂದ ಮೂವರ ಸಾವು ಪ್ರಕರಣ: ಮೃತರ ಕುಟುಂಬಕ್ಕೆ ಸಿಎಂ ಬೊಮ್ಮಾಯಿ‌ ಪರಿಹಾರದ...

ಬಂಟ್ವಾಳದ ಪಂಜಿಕಲ್ಲಿ‌ನಲ್ಲಿ ಗುಡ್ಡ ಕುಸಿತದಿಂದ ಮೂವರ ಸಾವು ಪ್ರಕರಣ: ಮೃತರ ಕುಟುಂಬಕ್ಕೆ ಸಿಎಂ ಬೊಮ್ಮಾಯಿ‌ ಪರಿಹಾರದ ಚೆಕ್ ವಿತರಣೆ

- Advertisement -
- Advertisement -

ಬಂಟ್ವಾಳ: ಬಂಟ್ವಾಳ ತಾಲೂಕಿನ ಪಂಜಿಕಲ್ಲಿನಲ್ಲಿ ಮಳೆಗೆ ಗುಡ್ಡ ಕುಸಿತದಿಂದ ಮೃತರಾದವರ ಕುಟುಂಬಸ್ಥರಿಗೆ ಸಿಎಂ ಬಸವರಾಜ ಬೊಮ್ಮಾಯಿ‌‌ ಇಂದು ಪರಿಹಾರ ಚೆಕ್ ವಿತರಣೆ ಮಾಡಿದ್ದಾರೆ.

ಉಪ್ಪಿನಂಗಡಿಯಲ್ಲಿ ಮಳೆ ಹಾನಿ ಮತ್ತು ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಬಿ.ಸಿ. ರೋಡ್ ಗೆ ಭೇಟಿ ನೀಡಿದ ಸಿಎಂ, ಪ್ರವಾಸಿ ಮಂದಿರದಲ್ಲಿ ಚೆಕ್ ವಿತರಣೆ ಮಾಡಿದರು.

ಗುಡ್ಡ ಕುಸಿತದಿಂದ ಮೃತಪಟ್ಟ ಮೂವರ ಕುಟುಂಬಗಳಿಗೂ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ.

ಈ ವೇಳೆ ಸಿಎಂ ಜೊತೆ ಕಂದಾಯ ಸಚಿವ ಆರ್. ಅಶೋಕ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಚಿವ ಅಂಗಾರ, ಸಂಸದ ನಳೀನ್ ಕುಮಾರ್ ಕಟೀಲು ಮತ್ತು ಡಿಸಿ ಡಾ. ರಾಜೇಂದ್ರ ಉಪಸ್ಥಿತರಿದ್ದರು.

ಕಳೆದ ವಾರ ಸಂಭವಿಸಿದ್ದ ದುರಂತದಲ್ಲಿ ಗುಡ್ಡ ಕುಸಿದು ಮೂವರು ಮೃತಪಟ್ಟಿದ್ದರು.

- Advertisement -

Latest News

error: Content is protected !!