Friday, June 5, 2026
Homeಕರಾವಳಿಉಡುಪಿಉಡುಪಿ: ಮಳೆಗೆ ನಲುಗಿದ ವೃದ್ಧ ಅಸಹಾಯಕ ಸ್ಥಿತಿಯಲ್ಲಿ ಪತ್ತೆ: ಕುಟುಂಬಸ್ಥರ ಪತ್ತೆಗೆ ಮನವಿ

ಉಡುಪಿ: ಮಳೆಗೆ ನಲುಗಿದ ವೃದ್ಧ ಅಸಹಾಯಕ ಸ್ಥಿತಿಯಲ್ಲಿ ಪತ್ತೆ: ಕುಟುಂಬಸ್ಥರ ಪತ್ತೆಗೆ ಮನವಿ

- Advertisement -
- Advertisement -

ಉಡುಪಿ: ರಾಷ್ಟ್ರೀಯ ಹೆದ್ದಾರಿ ಅಂಬಲಪಾಡಿ ಬೈಪಾಸ್ ಬಳಿ ಕಳೆದ ಮೂರು ದಿನಗಳಿಂದ ಮಳೆಗೆ ನಲುಗಿದ ವೃದ್ಧರೊಬ್ಬರು ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ವೃದ್ಧರು ಕಳೆದ ಮೂರು ದಿನಗಳಿಂದ ಅಸ್ವಸ್ಥರಾಗಿ ಮಲಗಿದ್ದಾರೆ ಎಂದು ಸಾರ್ವಜನಿಕ ಮೂಲಗಳಿಂದ ತಿಳಿದುಬಂದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧನನ್ನು ಗಮನಿಸಿದ ವಿಶು ಶೆಟ್ಟಿ ಅಂಬಲಪಾಡಿಯವರು ಜಿಲ್ಲಾಸ್ಪತ್ರೆ ದಾಖಲಿಸಿದ್ದಾರೆ.

ತೀವ್ರ ನಿತ್ರಾಣರಾಗಿ ನರಳುತ್ತಿದ್ದು, ನಾರಾಯಣ(75) ಹೆಸರು ಎಂದು ಹೇಳಿಕೊಂಡಿದ್ದು, ಕೊಳಲಗಿರಿ ಲಕ್ಷ್ಮೀನಗರದಲ್ಲಿ ತಮ್ಮ ಸಂಬಂಧಿಕರಿದ್ದಾರೆ ಎಂದು ತಿಳಿಸಿದ್ದಾರೆ. ಸಂಬಂಧಿಕರು ಜಿಲ್ಲಾಸ್ಪತ್ರೆ ಸಂಪರ್ಕಿಸಲು ಕೋರಲಾಗಿದೆ.

- Advertisement -

Latest News

error: Content is protected !!