Sunday, August 30, 2026
Homeಕರಾವಳಿಕೊರೋನಾ ಆರ್ಭಟ: ವಿಟ್ಲ ಪೊಲೀಸ್ ಠಾಣೆಯ ಪೇದೆಯೋರ್ವರಿಗೆ ಸೋಂಕು ದೃಢ

ಕೊರೋನಾ ಆರ್ಭಟ: ವಿಟ್ಲ ಪೊಲೀಸ್ ಠಾಣೆಯ ಪೇದೆಯೋರ್ವರಿಗೆ ಸೋಂಕು ದೃಢ

- Advertisement -
- Advertisement -

ಮಂಗಳೂರು: ನಿನ್ನೆ ಜಿಲ್ಲಾ ಕೋವಿಡ್ ಆಸ್ಪತ್ರೆ ವೆನ್ಲಾಕ್ ನಿಂದ ಬಂಟ್ವಾಳದ ಮೂವರು ಬಿಡುಗಡೆಯಾಗುವ ಮೂಲಕ ಕೊರೋನಾ ಮುಕ್ತವಾಗಿದ್ದ ಬಂಟ್ವಾಳ ತಾಲೂಕಿಗೆ ಇಂದು ಮತ್ತೆ ಬಂಟ್ವಾಳ ತಾಲೂಕಿಗೆ ವಿನಾಶಕಾರಿ ಕೊರೋನಾ ವಕ್ಕರಿಸಿದೆ. ವಿಟ್ಲ ಪೊಲೀಸ್ ಠಾಣೆಯ ಪೇದೆಯೋರ್ವರಿಗೆ ಸೋಂಕು ದೃಢವಾಗಿದೆ.

ಕರೋಪಾಡಿ ಯುವಕ ಪರಿಚಿತರ ಕಾರಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಆಗಮಿಸಿ, ಅಲ್ಲಿಂದ ಆಯಂಬುಲೆನ್ಸ್ ನಲ್ಲಿ ವಿಟ್ಲ ಕ್ವಾರಂಟೈನ್ ಕೇಂದ್ರಕ್ಕಾಗಮಿಸಿದ್ದರು. ಆದರೆ ಕೇಂದ್ರ ಬೀಗ ಹಾಕಿದ್ದರಿಂದ ಅವರು ವಿಟ್ಲ ಠಾಣೆಗೆ ತೆರಳಿ ಪೊಲೀಸರ ಸಹಾಯದೊಂದಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ವಾರಂಟೈನ್ ಗೊಳಗಾಗಿದ್ದರು.

ಬಳಿಕ ಕರೋಪಾಡಿ ಯುವಕನಿಗೆ ಕೋವಿಡ್-19 ಪಾಸಿಟಿವ್ ಆಗಿತ್ತು. ಸದ್ಯ ಪೊಲೀಸರ ಸ್ವಾಬ್ ಟೆಸ್ಟ್ ವೇಳೆ ಒರ್ವ ಪೊಲೀಸ್ ಪೇದೆಯಲ್ಲಿ ಸೋಂಕು ಪಾಸಿಟಿವ್ ಪತ್ತೆಯಾಗಿದೆ.

- Advertisement -

Latest News

error: Content is protected !!