Sunday, June 7, 2026
Homeತಾಜಾ ಸುದ್ದಿತಾಯಿಯ‌ ಮೃತದೇಹ ಮನೆಯಲ್ಲಿರುವಾಗೇ ಅದ್ಧೂರಿಯಾಗಿ ಮಂಟಪದಲ್ಲಿ ವಿವಾಹವಾದ ಯುವಕ

ತಾಯಿಯ‌ ಮೃತದೇಹ ಮನೆಯಲ್ಲಿರುವಾಗೇ ಅದ್ಧೂರಿಯಾಗಿ ಮಂಟಪದಲ್ಲಿ ವಿವಾಹವಾದ ಯುವಕ

- Advertisement -
- Advertisement -

ಬಿಹಾರ : ತಾಯಿಯ‌ ಮೃತದೇಹ ಮನೆಯಲ್ಲಿರುವಾಗೇ ಯುವಕನೊಬ್ಬ ಅದ್ಧೂರಿಯಾಗಿ ಮಂಟಪದಲ್ಲಿ ವಿವಾಹವಾದ ಘಟನೆ  ಬಿಹಾರ ಆಡೀಹ್ ಠಾಣೆ ವ್ಯಾಪ್ತಿಯ ನ್ಯೂ ಮೆರಿನ್ ಗೋಪಾಲೀಚಕ್ ಪ್ರದೇಶದಿಂದ ವರದಿಯಾಗಿದೆ.

ಓಂ ಕುಮಾರ್ ತಾಯಿಯ ಮೃತದೇಹವನ್ನು ಮನೆಯಲ್ಲಿರಿಸಿ ಮದುವೆಯಾದ ಯುವಕ . ತಾಯಿ ಈತನ ಮದುವೆ ನೋಡಲು ಬಯಸಿದ್ದರು. ಅದರಂತೆ ಮಗನ ಮದುವೆಯನ್ನು ಸರೋಜ ಎಂಬಾಕೆ ವಿಜೃಂಭಣೆಯಿಂದ ಮಾಡಲು ಎಲ್ಲಾ ರೀತಿಯ ತಯಾರಿ ನಡೆಸಿದ್ದರು. ಗ್ರಾಮಸ್ಥರಿಗೆಲ್ಲಾ ಆಹ್ವಾನ ನೀಡಲಾಗಿತ್ತು.

ಆದರೆ ಸರೋಜ ಕಳೆದ ಕೆಲವು  ದಿನಗಳಿಂದ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸರೋಜ ನಾನು ಸತ್ತರೂ ಅದ್ಧೂರಿಯಾಗಿಯೇ ನೀನು ಮದುವೆಯಾಗಬೇಕು ಎಂದು ಮಗನ ಬಳಿ ಪ್ರಮಾಣ ಮಾಡಿಸಿದ್ದರು. ಆದರೆ ಜುಲೈ 8ರಂದು ತಾಯಿ ಮೃತಪಟ್ಟಿದ್ದಾರೆ.ಮದುವೆ ಜುಲೈ 10ರಂದು ನಿಗದಿಯಾಗಿತ್ತು. ತನ್ನ ತಾಯಿಯ ಕೊನೆಯ ಆಸೆಯನ್ನು ಪೂರೈಸಲು, ತಾಯಿಯ ಶವವನ್ನು ಮನೆಯಲ್ಲೇ ಬಿಟ್ಟು ಮಗ ಜುಲೈ 8 ರಂದೇ
ಮದುವೆಯಾಗಿದ್ದಾನೆ. ಬಳಿಕ ಅಂತ್ಯಸಂಸ್ಕಾರ  ನೆರವೇರಿಸಿದ್ದಾನೆ.

- Advertisement -

Latest News

error: Content is protected !!