Friday, June 5, 2026
Homeಚಿಕ್ಕಮಗಳೂರುಶೃಂಗೇರಿ-ಹೊರನಾಡು ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಭೂಕುಸಿತ

ಶೃಂಗೇರಿ-ಹೊರನಾಡು ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಭೂಕುಸಿತ

- Advertisement -
- Advertisement -
ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡನ್ನು ಸಂಪರ್ಕಿಸುವ ಮಾರ್ಗಮಧ್ಯೆ ಭೂಕುಸಿತ ಸಂಭವಿಸಿದೆ.  ರಸ್ತೆಯ ಪಕ್ಕದಲ್ಲಿನ ಮಣ್ಣು ಕುಸಿದಿದ್ದು ಬೃಹದಾಕಾರದ ಮರಗಳು ಉರುಳಿದ್ದು ವಾಹನ ಸವಾರರು ಭಯದಲ್ಲಿ ಸಂಚಾರ ಮಾಡುವಂತಹ ಪರಿಸ್ಥಿತಿ ಎದುರಾಗಿದೆ.

ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಅತ್ತಿಗುಡಿಗೆ ಗ್ರಾಮಪಂಚಾಯತ್ ವ್ಯಾಪ್ತಿಯ ಅಬ್ಬಿಕಲ್ಲು ಬಳಿಯಲ್ಲಿ ಅಂದಾಜು 120 ರಿಂದ 150 ಅಡಿಗಳಷ್ಟು ಆಳಕ್ಕೆ ಭೂಕುಸಿತ ಉಂಟಾಗಿದೆ. ಶೃಂಗೇರಿ, ಹೊರನಾಡು ಹಾಗೂ ಕಳಸ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!