Sunday, June 7, 2026
Homeತಾಜಾ ಸುದ್ದಿನನ್ನ ತಮ್ಮ ಹರ್ಷನ ಸಾವಿಗೆ ನ್ಯಾಯ ಸಿಗುವ ಭರವಸೆಯಿಲ್ಲ: ಸಹೋದರಿ ಅಶ್ವಿನಿ ಹೇಳಿಕೆ

ನನ್ನ ತಮ್ಮ ಹರ್ಷನ ಸಾವಿಗೆ ನ್ಯಾಯ ಸಿಗುವ ಭರವಸೆಯಿಲ್ಲ: ಸಹೋದರಿ ಅಶ್ವಿನಿ ಹೇಳಿಕೆ

- Advertisement -
- Advertisement -

ಶಿವಮೊಗ್ಗ :ನನ್ನ ಸಹೋದರ, ಹಿಂದೂ ಕಾರ್ಯಕರ್ತ ಸಾವಿಗೆ ನ್ಯಾಯ ಸಿಗುವ ಭರವಸೆಯಿಲ್ಲ ಎಂದು ಹರ್ಷ ಸಹೋದರಿ ಅಶ್ವಿನಿ ಬೇಸರ ಹೊರ ಹಾಕಿದ್ದಾರೆ.

ಶಿವಮೊಗ್ಗದಲ್ಲಿ ಫೆಬ್ರವರಿಯಲ್ಲಿ ಕೊಲೆಯಾಗಿದ್ದ ಹರ್ಷ ಸಹೋದರಿ ಅಶ್ವಿನಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬಳಿ ತಮ್ಮನ ಕೊಲೆ ಆರೋಪಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ದೂರು ನೀಡಲು ಬೆಂಗಳೂರು ಮಲ್ಲೇಶ್ವರಂ ನ ಬಿಜೆಪಿ ಕಚೇರಿಗೆ ಹೋಗಿದ್ದಾರೆ. ಈ ವೇಳೆ ಅವರು ಜೋರಾಗಿ ಮಾತನಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ವಿನಿ ನಾನು ಮಾತನಾಡಲು ಸಮಯ ಕೇಳಿದ್ದೆ ತಪ್ಪಾಯಿತು.ಸರ್ಕಾರದ ಮೇಲೆ ನಂಬಿಕೆ ಹೊರಟು ಹೋಯಿತು. ನ್ಯಾಯ ಸಿಗುವ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ ಎಂದು ಬೇಸರ ಹೊರ ಹಾಕಿದ್ದಾರೆ.

- Advertisement -

Latest News

error: Content is protected !!