Friday, June 27, 2025
Homeತಾಜಾ ಸುದ್ದಿಹಿಂದೂ ದೇವರಿರುವ ಪೇಪರ್‌ನಲ್ಲಿ ಚಿಕನ್ ಮಾರಾಟ: ಪೊಲೀಸರ ಮೇಲೆ ಹಲ್ಲೆ: ವ್ಯಕ್ತಿಯ ಬಂಧನ

ಹಿಂದೂ ದೇವರಿರುವ ಪೇಪರ್‌ನಲ್ಲಿ ಚಿಕನ್ ಮಾರಾಟ: ಪೊಲೀಸರ ಮೇಲೆ ಹಲ್ಲೆ: ವ್ಯಕ್ತಿಯ ಬಂಧನ

spot_img
- Advertisement -
- Advertisement -

ಯುಪಿ:ಹಿಂದೂ ದೇವರ ಚಿತ್ರವಿರುವ ಪೇಪರ್ ನಲ್ಲಿ ಚಿಕನ್ ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಹಾಗೂ ಪೊಲೀಸ್ ಅಧಿಕಾರಿಗಳ ತಂಡದ ಮೇಲೆ ದಾಳಿ ನಡೆಸಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. 

ಭಾನುವಾರ ಈ ಘಟನೆ ನಡೆದಿದ್ದು, ತಾಲಿಬ್ ಹುಸೇನ್ ಎಂಬಾತ ತನ್ನ ಅಂಗಡಿಯಿಂದ ಚಿಕನ್ ನ್ನು ಹಿಂದೂ, ದೇವತೆ, ದೇವರುಗಳ ಫೋಟೋವನ್ನೊಳಗೊಂಡ ಪೇಪರ್ ನಲ್ಲಿ ಮಾರಾಟ ಮಾಡುತ್ತಿದ್ದ, ಈ  ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಆತನ ಅಂಗಡಿಗೆ ಪೊಲೀಸರು ತಲುಪುತ್ತಿದ್ದಂತೆಯೇ ಹುಸೇನ್ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದು, ಹತ್ಯೆ ಮಾಡುವ ಉದ್ದೇಶ ಹೊಂದಿದ್ದ ಎಂದು ಎಫ್ಐಆರ್ ನಲ್ಲಿ ಹೇಳಿದ್ದಾರೆ. ಐಪಿಸಿ ಸೆಕ್ಷನ್ 153-A (ಎರಡು ಗುಂಪು, ಧರ್ಮ, ಜನಾಂಗದ ನಡುವೆ ದ್ವೇಷ ಮೂಡಿಸುವುದು) 295A (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) 307 (ಹತ್ಯೆಗೆ ಯತ್ನ)ದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!